ಸುಪ್ರಸಿದ್ಧಗ್ರೀಕ್ ವೇದಾಂತಿ ಅಂದೇ ಏನು ಹೇಳಿದ್ದ?
- hrhrau
- Jul 3, 2023
- 1 min read
Updated: Jul 5, 2023
3-7-23
ಸುಪ್ರಸಿದ್ಧಗ್ರೀಕ್ ವೇದಾಂತಿ ಅಂದೇ ಏನು ಹೇಳಿದ್ದ?
" ಜ್ಞಾನಿಗಳು, ಅಥವಾ ಜ್ಞಾನವನ್ನು ಪ್ರೀತಿಸುವವರು ಅಧಿಕಾರಕ್ಕೆ ಬರುವವರಿಗೂ ಜನರಿಗೆ ಸಂಕಷ್ಟ ತಪ್ಪಿದ್ದಲ್ಲ"
---- ಈ ಮಾತು ಆ ಕಾಲದ ಜನರಿಗಲ್ಲದೆ ಇಂದಿಗೂ, ಎಲ್ಲ ದೇಶದ ಜನಾಂಗಗಳಿಗೂ ಅನ್ವಯಿಸುವಂತಹುದು..
ಜನ ರನ್ನ ಪ್ರೀತಿಸುವವರೆಂದು, ಜನರಿಗಾಗಿಯೇ ತಮ್ಮ ಜೀವಿತವೆಂದು ಟೊಳ್ಳು ಭರವಸೆಯನ್ನ ನೀಡುತ್ತಾ ಅಧಿಕಾರಕ್ಕೇರಿ, ನಂತರ ತಮ್ಮ ಕುಟುಂಬ ಹಾಗು ಅಧಿಕಾರವನ್ನಷ್ಟೇ ಪ್ರೀತಿಸುತ್ತಾ,ಅಧಿಕಾರಕ್ಕಾಗಿ ಏನೇ ದುಷ್ಟಕಾರ್ಯಗಳನ್ನೆಸಗಲು ಹಿಂಜರಿಯದವರು ದೇಶದ್ರೋಹಿಗಳಲ್ಲದೆ ಜನಹಿತಕ್ಕೆ ದುಡಿಯುವವರೆ? ಇಂಥಹವರುಗಳು ವಿದೇಶೀಯರನ್ನಅನುಕರಿಸುತ್ತಾ ಅವರಿಗಾಗಿ ಏನೇ ಮಾಡಲು ಕೂಡ ತಯಾರಾಗಬಲ್ಲರು. ಅಂಗ್ಲ ಭಾಷೆಯಲ್ಲಿ ರೂಢಿಯಲ್ಲಿರುವ ಒಂದು ಉಕ್ತಿಯಂತೆ ʼಒಬ್ಬ ಮನುಷ್ಯನ ಅಂತ:ಸತ್ವವನ್ನ ಅರಿಯಬೇಕೆಂದರೆ, ಅವನ ಒಡನಾಡಿಗಳ ಚಹರೆಯನ್ನ ನೋಡುʼ ಎನ್ನುವುದು ಬಹುವೇ ಸೂಕ್ತ ಅಭಿಪ್ರಾಯವು
ಎಲ್ಲ ದೇಶಗಳ ಇತಿಹಾಸವನ್ನ ಕೆದಕಿ ನೋಡಿದಾಗ, ಒಂದಲ್ಲ ಒಂದು ಸಂಧರ್ಭ, ಕಾಲದಲ್ಲಿ ಇಂತಹ ಅನೈತಿಕ, ದೇಶ ದ್ರೋಹಿ ಕಾರ್ಯಾಚರಣೆಗಳು ನಡೆದುಹೋಗಿರುವುದನ್ನ ನಮ್ಮ ಗಮನಕ್ಕೆ ಇತಿಹಾಸಜ್ಞರು ತಂದಿರುತ್ತಾರೆ ಕೂಡ. ಸುಖ, ವೈಭೋಗ, ಐಶ್ವರ್ಯ, ದ್ವೇಷ, ಮತ್ಸರ,ಅಟಾಟೋಪಗಳ ಹಿಂದೆ ಹೋಗುವ ಪ್ರತಿ ಜನಾಂಗವೂ ಒಂದಲ್ಲ ಒಂದು ಕಾಲದಲ್ಲಿ ಈ ರೀತಿ ಅಜ್ಞಾನಕ್ಕೆ ಗುಲಾಮರಾಗಿ, ಇಡೀ ದೇಶವನ್ನೇ ಕ್ರೌರ್ಯ, ರಕ್ತಪಾತ,ವಿಧ್ವಂಸಕ ಕೃತ್ಯಗಳಿಗೆ ತಳ್ಳಿ ಸಂಪತ್ತನ್ನ ನಾಶಮಾಡಿ,, ಸಮಾಜ ಒಡೆಯಲು ಕಾರಣರಾಗಿದ್ದು, ಮತ್ತೆ ಸಮಾಜವನ್ನ ಸರಿಮಾಡಲು ಶತಕಗಳೇ ಸಂದು ಹೋಗಿರುತ್ತವೆ ಕೂಡ. ಇಂತಹ ದುಷ್ಟ ಜನ, ಘಾತುಕರನ್ನ ನಮ್ಮ ಸಮಾಜವೇ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡರೆ, ಇಡೀ ದೇಶವೇ ಕೊನೆಗೊಂದು ದಿನ ಪರಕೀಯರಿಗೆ ಸುಲಭ ಸ್ವತ್ತಾಗಿ ಮತ್ತೆಮತ್ತೆ ಹಿಂದೆಲ್ಲಾ ನಡೆದುಹೋದಂತೆ ಪುನ:ಪುನ: ಬಡತನ,, ಧರ್ಮಚ್ಯುತಿ, ಪರಸ್ಪರ ದ್ವೇಷಾಸೂಯೆಗಳಲ್ಲೇ ಮುಳುಗಿ ಗುಲಾಮರಾಗಿಯೇ ಜೀವಿಸಿಕೊಂಡು ಬದುಕಬೇಕಾಗುವುದು ಅನಿವಾರ್ಯ. ಇಂದಿಗೂ ಚರಿತ್ರೆ ಮರುಕಳುಸುತ್ತಿರುವುದು ನಮ್ಮ ದೇಶದ ಇಲ್ಲವೇ ಜನರ ದೌರ್ಬಲ್ಯವೋ, ಶಾಪವೋ ?- ಇತ್ತೀಚೆಗಿನ ಹಿಟ್ಲರ್, ಮಸ್ಸೂಲಿನಿ, ಸ್ಟಾಲಿನ್,ಸದ್ದಾಂ ಹುಸ್ಸೈನ್,ಒಸಾಮ ಬಿನ್ ಲಡೆನ್ ಮತ್ತಿತರನೇಕ ನಾಯಕರೆನಿಸಿಕೊಂಡವರು ಮಾನವ ಕುಲಕ್ಕೇ ಕಂಟಕರಾಗಿ, ಲಕ್ಷಾಂತರ ಜನರನ್ನ ಚಿತ್ರಹಿಂಸೆಯಿಂದ ನರಳಿಸಿ, ಸಾವಿಗೆ ಕಾರಣರಾಗಿದ್ದನ್ನ ಚರಿತ್ರೆಯಲ್ಲಿ ಬಂದುಹೋಗಿದೆಯಲ್ಲವೋ? ಹಾಗಾದರೆ ಜನ ತಮ್ಮ ತಪ್ಪುಗಳನ್ನ ತಿದ್ದಿಕೊಳ್ಳುವಿದೇ ಇಲ್ಲವೋ? ಹಿಂದಿನ ಚರಿತ್ರೆಯಿಂದ ಕಲಿಯುವುದೇ ಇಲ್ಲವೋ?
Comments