ಪರಿಸ್ಥಿತಿ ವಿಪ್ರೀತಕ್ಕ ಹೋಗ್ಯಾದಲ್ವ ಸಾರು?
- haparna
- Jan 12, 2020
- 5 min read
ಪರಿಸ್ಥಿತಿ ವಿಪ್ರೀತಕ್ಕ ಹೋಗ್ಯಾದಲ್ವ ಸಾರು? ಲೇಖಕ: ಎಚ್. ಆರ್. ಹನುಮಂತ ರಾವ್, ಫೋ:8095658334. ನಮಸ್ಕಾರಾನ್ರೀ ಮೇಟ್ರೇಗೆ, ಸಾರು, ಅಡ್ಬಿದ್ದೆ, ಅಡ್ಬಿದ್ದೆ ಗುರ್ಗೋಳ್ಗೇ, ಬಾಪ್ಪ, ಬೊ ದಿನಾ ಆಯ್ತುಲ್ವ ನೀ ಈ ಪಕ್ಕ ಮುಖ ತೋರ್ಸಿ. ಏನಪ ಪರ್ಮೇಶೀ, ಈ ತಂಪು ಹೊತ್ನಾಗೆ ಇಷ್ಟು ದೂರ ನಿನ್ಪಾದ ಬೆಳ್ಸದೀ, ಯಾತ್ರ ಗ್ರಾಚಾರ ಕಾದಿದೆಯೋ, ಎಂಗೋ, ಆ ಶಿವ್ಗೇನಾದ್ರೂ ನನ್ಮ್ಯಾಗೆ ಮುನಸಾ, ಹೆಂಗೋ ನಾ ಕಾಣೆ. ತೆಗೀರಿ ಸಾರು, ಆ ಸಿವಗ ನನ್ಗ್ಯಾಗೇನಾದ್ರೂ ಹುಸಿ ಕೋಪಾ ಇದ್ದೀತಾನೋ, ಯಾಕಂದ್ರ ನಾನ್ ಈ ರಾಜ್ಕೀಯದಾಗ ಕಚಡಗಳ ಕೂಡನೂ ಇರ್ಬೇಕಾಗ್ತೈತಿ, ನನ್ಬಿಸಿನೆಸ್ಗ ಅವ್ರ ಬಿಟ್ಟಿರಕ್ಕಾಗಲ್ಲರೀ, ಹೌದಲ್ಲೋ ಸಾರು, ಆಂದಮೇಕೆ ಹುಡುಗ್ರಗೆ ಬುದ್ಧಿ ಹೇಳೋ ರತ್ನದಂತಾ ಗುರುಗೋಳ ಬಗ್ಗೆ ನಮ್ಶಿವ ಮುನಸಿಕೊಳ್ಳದಂದರಾ? ಹಂಗೇನಿರಾಕಿಲ್ಲ, ಬುಡಿ ಬುದ್ಧಿ. ಶಿವ್ಗ ಮೇಟ್ರಗಿರಿ ಚಿಕ್ಕಾಸೂ ಲೆಕ್ಕಕ್ಕ ಬರಾದಿಲ್ಲ, ‘ಖೋಟ ಸೂರ್ಯಸಮಕ್‍ರತ್ನಪ್ರಬಾ’ ಅನ್ನಂಗಿದೀರೀ ತಾವುಗಳು. ಹಂಗೇನೂವೆ ಮುನ್ಸಿಕೊಂಡ್ರ, ಆ ಸಿವ್ಗ ನಾನು ಮುಡಿಕೊಟ್ಟು ಹರಕೆ ತೀರ್ಸಿಕೊಳಾದೇ ಬಿಡಾದಿಲ್ಲ. ಶಿವ ಆದ್ರೆ ಏನ, ದುರ್ಗಮ್ಮ ಆದ್ರ ಏನ, ನಿಮ್ಮಂತಾವ್ರಗ ತ್ರಾಸ ಕೊಡೋದಂದ್ರೆ, ನಾನೇನ, ಬ್ರಹ್ಮ, ವಿಷ್ಣು ಕೂಡಾ ಸುಮಕಿರೋವ್ರಲ್ಲ. ಲೇ ಪರ್ಮು, ಸುಮ್ಸುಮ್ಕೆ ಏನೇನೋ ಒದರ್ಬ್ಯಾಡ. ಆದ್ರೆ, ಮಾತಿನ್ವರ್ಸೇಲಿ ನನ್ನ ಹೊಗಳಾದ ಇರ್ಲಿ, ನನ್ಯಾಕೆ ಖೋಟಾ ನೋಟು ಮಾಡೀಯ, ನಾವೇನ ರತ್ನ ಮಡಿಗೀವಿ ಅಂದ್ಕಂಡ್ರ, ಅಂತಾ ಗುಮಾನಿ ಏನಾರ ಬಂದ್ರ, ಈ ಬಡಕಲು ಮೇಷ್ಟ್ರುಗೆ ಅವೆಲ್ಲಾ ಪಡೆಯೋಕ ಹೆಂಗೆ ಸಾಧ್ಯ ಅಂತ್ಹೇಳಿ ಸರ್ಕಾರದೋರು ನನ್ನ, ನಿನ್ನ ಸೇರ್ಸಿ ಸಿಬಿಐಗೆ ಹಿಡ್ಕೊಟ್ಟುಬಿಟ್ಟಾರ. ನಾನೇನ ಯಾವ್ದಾದ್ರ ಕನಕ್ಪುರದ ಹಳದಿ ಬಂಡೇನಾ, ಇಲ್ಲಾ ಬಳ್ಳಾರೀಗಿರೋ ಕಪ್ಪು ಬಂಗಾರಾನ? ಕೋಟಿ ಸೂರ್ಯ ಸಮಪ್ರಭ’ ಅಂತ ಸರ್ಯಾಗ್ ಉಚ್ಛಾರ ಮಾಡಲೇ, ಅದೆಂಗ ನೀ ನನ ಶಿಷ್ಯ ಅದಿ, ಅದ ಮೊದಲ ಆ ಶಿವ್ಗ ಕೇಳ್ಲಿಕ್ಕ್ಬೇಕು ನನ್ಮ್ಯಾಗೆ ಮುನ್ಸಿಕೊಳ್ಳಾದಕ ಮುಂಚೆ. ಅಂಗಲ್ಲ ಸಾರು, ನಿಮ್ಮಂತ ಮೇಟ್ರುಗಾಳು ಕೋಟಿ, ಕೋಟಿ ಸೂರ್ಯಗಳಿಗೆ ಸಮಕ್ಬರಾ ರತ್ನಗಳಷ್ಟು ಪ್ರಬ ಇರೋವ್ರಂತಾ ಅನ್ಕಂಡಿ ಹಾಗಂದೆ. ಮಾತ್ಗೇ ಹೇಳಾವ ನಾ,… ಆ ಮಾತು ಬಿಡು ಅತ್ಲಾಗ, ಮತ್ತ ಏನ್ಸಮಾಚಾರ, ಮನೆ ಕಡೆ ಹೆಂಗಿದೀರ? ಈ ಕಡೆ ನಿನ್ನ ಪಾದ ಬೆಳ್ಸಿದೀ? ಈ ಎಕಸ್‍ಟೆನ್ಸನಾಗ ಯಾರೋ ವಿಐಪೀ ಅದಾರಂತ, ತೀಳೀತಲ್ಲ ನಿಮ್ಗ ಯಾರಂತ? ಆ ಮಂತ್ರಿ ಚೇಲಾನ ನೋಡಾಕ ಬಂದು ಹಾಗೇ ನಿಮ್ಮನ್ನ ಕಂಡಿ ಆಶೀರ್ವಾದ ಪಡ್ಕಳ್ಳಾವ ಅಂತ ಬಂದೀನಿ. ಈಗಿನ್ದಿನಾಗಳಾಲ್ಲಿ ರಾಜಕೀಯ ಬೋ ಕಚಡಾ ಆಗೋಗದೆ ಸಾರು, ಅವರವರ ಗಲಾಟೆನಾಗ ನಮಗ ಸರ್ಕಾರದಿಂದ ಬರ್ಬೇಕಾದ ಹಣ ಎಲ್ಲಾ ಸೀಜಾಗೋಗದೆ. ಯಾಕೆ ಯೋಳ್ತೀರಿ ನಮಂತಹವ್ರ ಪಾಡ್ನ. ಈ ಪಾರ್ಟಿಗಳ ಕಿತ್ತಾಟ, ಅತಂತ್ರ, ಕುತಂತ್ರ, ಷಡ್ಯಂತ್ರ ಅಂತ ರಿಸಾರ್ಟನಾಗ ಎಮ್ಯಲೇಗಾಳು ಕೂಡಾಕ್ಕೊಳ್ಳಾದೇನಾ, ಅವರ್ನ ಕಾಯೋಕೆ ಮತ್ತಷ್ಟು ಘೋರಿ, ಅಘೋರಿಗಳೇನಾ? ಕೆಲವ್ರು ಹೋಟೆಲ್‍ನಾಗ ಮುಖ ಮರಸಿಕೊಳ್ಳಾದೇನು, ಅವರ್ನ ಹಿಡಿದು ಪುಡಿಪುಡಿಮಾಡಲಿಕ್ಕ ಎಲಡ್ಕೆ ಹಾಕ್ಕಂಡ್ ಜಗೀತ, ಮಸಾಲ ಪುರಿ ತಿಂತಾ ಮತ್ತಷ್ಟು ಪಾರ್ಟಿ ಪೈಲ್ವಾನ್ಗಳು ಗೇಟ್ನಗ ಕಾಯೋದೇನ, ಅಬಬ್ಬಾ! ಇವೆಲ್ಲಾ ಸಿನೆಮಾದಾಗ ನೋಡಿದ್ರೆ ಮೈ ಝಮ್ ಅನಸಿದಂಗೈತಿ. ನೋಡು, ಇಂತಾ ಸರ್ಕಾರೀ ಜನಗೋಳ್ಮಧ್ಯ ಇವೆಲ್ಲ ಇರೋದೇಯ, ಇಂಥದೆಲ್ಲ ಅವ್ರುಗೋಳ್ಗೆ ಕಾಮನ್. ತಿಂದ್ಮ್ಯಾಕೆ ಮೈ ಮತ್ತೊಬ್ರ ಮೈಗ ಒರ್ಸೋ ಕೆಟ್ಟ ಚಟ ಇದ್ರ- ಹಂಗಂತಾ ಎಲ್ಲಾರೂ ಅಂಗೇನೇವೆಯ ಅಂತ ಹೇಳ್ಳಿಕ್ಕ ಬರೋದಿಲ್ಲ. ಒಳ್ಳೇವ್ರೂ ಉಂಟು- ನಾನೂ, ನೀನೂ ಏನ್ಮಾಡ್ಲಿಕ್ ಸಾಧ್ಯ? ಬಿಡು ಅತ್ಲಾಗೆ. ಈ ತರಾ ರಿಸ್ಕ ಇರೋದ ಬೇಡ ಅನ್ನೋದಾದ್ರ ನಮ್ಮಂತ ‘ಜೋ ಹುಕುಂ’ ಕೆಲಸಕ್ಕ ಸೇರ್ಕೋ, ಅಷ್ಟೇಯ. ಸ್ವಾತಂತ್ರ್ಯ ಬಂದಾಗ್ಲಿಂದಾನೂವೆ ಏನ ಕಡಿದೀವಿ, ದೇಶ ಹೀಗೆ ಇದ್ರ ಎಕ್ಕುಟ್ಕೊಂಡ್ ಹೋಗಾದ ಗ್ಯಾರಂಟೀ, ಅಲ್ವ ಸಾರು? ನೋಡು ಪರ್ಮೇಶಿ, ಆಗಿನ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಜನ ತಮ್ಮ ಆಸ್ತಿ, ಮನೆ, ಮಠ, ಜಮೀನು, ತಂದೆ ತಾಯಿ, ಮಕ್ಳು, ಜೈಲವಾಸ, ಲಾಠೀ ಏಟು, ಎಲ್ಲಾ ಅನುಭವಿಸದ್ದ ಯಾಕ? ಯಾಕಂದ್ರ ಅವ್ರುಗೋಳು ಅದ್ರ ಕಷ್ಟ ಅನುಭವಿಸದವ್ರು, ಗುಲಾಮಗಿರಿ ಎಂದೆಂದಿಗೂ ಬ್ಯಾಡ, ನಮ್ಮ ಸುಫರ್ದಿನಾಗೆ ನಾವಿರೋಣ, ಬಡತನ ಹೋಗಿ ಎಲ್ಲಾರೂ ಜುಂ ಅಂತ ಜೀವ್ನ ಮಾಡ್ಕಂಡ್ ಪ್ರಪಂಚದಾಗೇ ಭಾರತ ಅಂದ್ರ ನಮ್ಮಿಂದ ಕಲೀಬೇಕು ಇತರೇ ಅವ್ರು ನಮ್ಧರ್ಮ, ನ್ಯಾಯ, ನೀತಿಗಳ ಬಗ್ಗೆ ಅಂತ ಅಲ್ವೇನಪಾ? ಇರ್ಬೋದು ಸಾರು, ಆದ್ರೆ ಈ ಕಚಡಾಗಳು… ಯಾಕಂದ್ರ, ಸ್ವಾತಂತ್ರ್ಯ ಬಂದ್ರ ಅವ್ರ ಮುಂದಿನ ಪೀಳ್ಗೆನಾದರ್ರೂ ಸಂತೋಷವಾಗಿರ್ಲಿ, ಯಾರ ಗುಲಾಮ ಚಾಕ್ರಿನಾಗೂ ಇರ್ದೆ ವಿದ್ಯಾವಂತ್ರಾಗ್ಲಿ,ದೇಶಾಭಿಮಾನ ಬೆಳ್ಸ್ಕಂಡ್ ನೆಮ್ಮದಿಯಾಗ ಬಾಳ್ಲಿ ಅಂತ. ಹೌದಲ್ಲೋ? ಬೋ ತಪ್ಪು ಎಣಕೆ ಮಾಡಕಂಡಗ್ ಕಾಣ್ತೈತಿ ನಮ್ಮ ಹಿರಿಯೋರುಗಳು ಸಾರು, ದೊಡ್ದೊಡ್ ಆಶೆ ಮಡಕೊಂಡ್ ಬೋ ತಪ್ಪು ಮಾಡದಂದ್ರೆ ಇದೇನೇವೆಯ. ಚರಿತ್ರೆನಾಗ ನಾವೋದ್ದ ಪರ್ಕಾರ ನಮ್ನಮ್ ಯೋಗ್ಯತೆ ಏನಪ, ಒಂದ್ಕಾಲ್ದಾಗ ಮೊಗಲ್ರು, ಅವ್ರಗ ಮುಂಚೆ ಇನ್ಯಾರಾರೋ, ಬಹಳ ಹಿಂದೇನೇ ಅಲೆಕ್ಸಾಂಡರ್ ಅನ್ನೋವ, ಹೀಂಗೆಲ್ಲ ಊರಾಚೆಗಿನ್ಪರ್ದೇಶಿಗಳ್ನೆಲ್ಲಾ ಒಳಗ್ಬಿಟ್ಕಂಡು ಅವ್ರ ಕಾಲಿನ ಬೂಟು ನೆಕ್ಕೋತರ ಮಾಡ್ಕಂಡೀವಿ, ಅಲ್ವೆ ಸಾರು? ಗಾಂಧಿ ತಾತ ಯಾಕಾರ ಅಹಿಂಸ ಅಹಿಂಸ ಅಂತ್ ಹೋರಾಡಿದ್ಯಾಕ ಸಾರು? ಬೋ ತಪ್ಪು ಇಂತಾ ದೃಷ್ಟಿ ಮಡಕ್ಕೊಂಡಿದ್ದ, ಏನಂತೀರಿ ಮೇಟ್ರೇ? ಹಂಗಲ್ಲೇ ಲೇ, ಅಂದವ್ರು ಕಷ್ಟ, ಅವಮಾನ, ಗುಲಾಮಗಿರಿ ಅನುಭವಿಸಿದ್ದಕ್ಕ ಅಂಗ್ಲರನ್ನ ಓಡಿಸಿ ನೆಮ್ದಿಯಾಗಿರ್ಬೇಕಷ್ಟೇ ಅಂತ. ಆದ್ರ ಮುಂದ್ರೆ ನಮ್ಮ ಜನ ತಮ್ಮನ್ನ ತಾವೇ ಆಳೋಕೆ ಯೋಗ್ಯತೆ ಇದ್ಯಾ ಅನ್ನೋದ ಯೋಚ್ನೇನೆ ಮಾಡಕ್ಕ ಅವ್ರೇನ ಭವಿಷ್ಯ ಹೇಳೋ ಟೀವಿ ರಂಗುರಂಗೀ ಜ್ಯೋತಿಷಿಗಳಾ? ಅಧಿಕಾರ ಅಂತ ಹಪಹಪಿಸೋ ಈ ಜನ ಕೈನಾಗ ದುಡ್ಮಡಿಕ್ಕಂಡು ಚುನಾವಣೇಗೆ ನಿಂತು ಗೆಲ್ಲೋಕ ಏನೇನ ತಂತ್ರ ಮಾಡಕ್ಕೂ ಸರಿ. ಜಾತಿಮ್ಯಾಗೆ ಜನರ್ಗೆ ಬೇಧ ಎಣಿಸಿ, ಹೆಂಡ, ದುಡ್ಡು, ವಗೈರೆ ಸವಲತ್ಗಳ್ನ ಸರ್ಕಾರೀ ಬೊಕ್ಕಸದಿಂದಲೋ, ಬೇರೆ ಎಂಗೋ ಸಂಪಾದ್ಸಿದ್ದ ದುಡ್ಡಿಂದ ಕೊಟ್ಟು ವೋಟು ತಗಳ್ಳಾವರು ಸಾರು, ಎಲ್ಲಾರ್ಗೂ ಗೊತ್ತಿರೋ ವಿಸ್ಯಾನೆಯ. ಆದ್ರ, ನೀ ಇವತ್ಯಾಕೆ ದುಡೀತಿ? ಬಿಪೀಲ್ ಅಂತಿದ್ರೆ ನಿಂಗೆ ರೇಷನ್ ಅಕ್ಕಿ ಚೀಪ್ರೇಟ್ನಾಗ ಕೊಡ್ತಾರೆ, ಅದೆಂಥದೋ ಕ್ಯಾಂಟೀನ್ಬೇರೆ ಮಡಕ್ಕಂಡವ್ರೆ, ಏನೇನ ಬೇಕೋ ಇಂತ ಚಿಲ್ರೆ ಸವಲತ್ತು ಸಿಗ್ತದೆ, ನೀ ಸುಮ್ನಿದ್ಬಿಡು, ಸಾಲ ಮಾಡಿ, ರಾತ್ರಿ ತಂಕ ದುಡಿದು, ನಿನ್ಕೈಕೆಳಗಿನವ್ರಗೂ ಕೆಲ್ಸ ಕೊಟ್ ಸಂಸಾರ ನಿಭಾಯಸೊದ್ಯಕಪ? ಏನ್ಮೇಟ್ರೆ ಹೀಂಗೆ ಯೋಳಾವ್ರಿ ನೀವ್. ಸ್ವಾತಂಂತ್ರ್ಯ ಬಂದು ಎಪ್ಪತ್ತು ವರ್ಷನಾದ್ರೂನೂವೆ ಬಿಲೋ ಪಾವರ್ಟಿಲೇನ್ನಾಗೆ ಯಾಕ ಇರ್ಬೇಕ? ವೋಟು ಕೊಟ್ಟ ಜನ ಭಿಕ್ಷೆ ಬೇಡೋವ್ರ ತರಾ ಕೈ ಮಡಿಕ್ಕಂಡ್ ಇವ್ರಗಳ ಅಡಿಯಾಳಗತರಾ ಇರ್ಬೇಕ? ದುಡಿದಷ್ಟೂ, ಸಂಪಾದ್ಸಿ, ಚೆನ್ನಗಿದ್ದು ಸಂಸಾರ ಚೆನ್ನಿರ್ಬೆಕು ಸಾರು, ಅದೇ ಎಲ್ರ ಆಶೇನೇವೂ ಆಗಿರ್ಬೇಕಲ್ಲವ್ರ? ನಾ ಯಾರ ಋಣದಾಗೂ ಇರ್ಬೇಕ ಯಾಕ ನಮ್ದೇ ಸರ್ಕಾರ ಅಂದ್ಮ್ಯಾಕೆ. ಇದೀಗ ದಾರಿಗೆ ಬಂದೆ ನೀ, ವೋಟು ಕೊಟ್ಟು ಆಡಳಿತ ಮಾಡ್ರಪ ಅಂದ್ರ ನಮ್ಗೇ ಭಿಕ್ಷೆ ಹಾಕದಂದ್ರ ಎಂಥದು? ಅದ್ಕೇನೇವೆಯ ಅಂದಿನ ಜನ್ರ ಆಶೆ. ಅವ್ರ ಮುಂದಿನ ಪೀಳ್ಗೆನಾದ್ರೂ ಯಾರ ಮುಂದೆ ನಿಂತು ಕೈಚಾಚಿ ಬೇಡ್ಕೊಳ್ಳಾದೂ ಬೇಡ, ಅವ್ರಗ ಗುಲಾಮ್ನಗಿರದೂ ಸಾಕೂ ಅಂತ, ಗೊತ್ತಾತೇನಪಾ, ಹಾಗೆ ಯೋಳೋದಾದರ ನನಗೊಂದ್ ಡೌಟು. ಏನಂದ್ರ, ಮತ್ಯಾಕ ಎಪ್ಪತ್ವರ್ಷನಾದ್ರೂ ಸರ್ಕಾರ ಜನರ್ನ ಬಡವ್ರು, ಬಡವ್ರು ಅಂತ್ಲೇ ಕರ್ಕಳ್ತವ್ರೆ? ಇವ್ರ ಅಧಿಕಾರ ಹೀಗೇ ಇದ್ರೆ ಇನ್ನೆಪ್ಪತ್ತು ವರ್ಷಾನಾದ್ರೂನೇವೇ ಜನ್ರನ ಬಡವ್ರಂತ್ಲೇ ಮಡಕ್ಕಂಡ್ ಇರ್ತಾರ? ರೇಷನ್ ಅಕ್ಕಿ, ಅದೂ ಇದು ಅಂತ್ ಬಡವ್ರಗ ಸವಲತ್ತು ಕೊಡ್ತಿವಿ ಅಂತೇಳಿ, ಅಲ್ಲೂ ಹೆಗ್ಗಣಗಳು ಸೇರ್ಕಂಡ್ ಗುಳುಂ ಮಾಡ್ಕಂತಾನೇ ಇರ್ತಾರ? ಅವ್ರ ವಂಶಾನ ಬೆಳಸ್ಕಂಡು, ಕೋಟಿಕೋಟಿ ಹಣ. ಆಸ್ತಿ ಪರಪಂಚಾದಾಗೆಲ್ಲಾ ಕಡೆ ಮಾಡಿಕ್ಕಂಡ್, ಜನಗಳ ಕೈಗೇ ಚಿಪ್ಪೇ ಕೊಡೋದ ಇವ್ರುಗೋಳ? ಆಗ್ಗೆ ಪರ್ಕೀಯರ್ಗೆ ದಾಸ್ಯ, ಇಲ್ವ ಈ ಪರಿ ಜನ್ಗೋಳ್ಗೇ ಗುಲಾಮರಾದಂಗ ಆಗ್ಬೋದ, ಹೆಂಗೆ ಮೇಟ್ರೆ? ಇವ್ರು ಪ್ರತಿ ಎಲೆಕ್ಸನ್ನಾಗೂ ಬಡವ್ರೂ, ಬಡವ್ರಗೇಂತ ಅಂತ್ಲೇ ವೋಟ್ಪಡ್ಕೊಂತಾರ, ಅದಕ್ಯಾರ ಹೊಣೆ ನೀ ಹೇಳ. ನೋಡಪ, ಮನುಷ್ಯನ್ಗೆ ಕೈ ತುಂಬ ಕೆಲ್ಸ ಇದ್ ಸಂಪಾದ್ಸಿದಷ್ಟೂ ಒಳ್ಳೇದೇ ಕೈಕಾಲ್ಗಟ್ಟಿ ಇರೋಗಂಟ ಅನ್ನೋ ನೀ ಹೇಳಿದ್ದ ಮಾತ್ನ ನಮ್ಸರ್ಕಾರಗಳು ನಿಜವಾಗಿ ಪಾಲಿಸ್ಕಂಡು ಬಂದಿದ್ರೆ, ಯಾವ ಗಟ್ಟಿ ಆಳೂ ಮನೇಗೆ ಕೂರೋದೇ ಆಗ್ಲಿ, ರಸ್ತೆನಾಗ ಸುಮ್ಸಮ್ಕೆ ಅಲೀತಾ ಇರೋದಾಗ್ಲಿ ಕಂಡ್ರೆ ಅವರ್ನ ರೆಟ್ಟೆ ಹಿಡಿದು, ಕರ್ಕೊಂಡೋಗಿ ಕೆಲ್ಸ ಕೊಟ್ಟು ದುಡಿದು ತಿನ್ನೋದಕ್ಕ ಅವಕಾಶ ಮಾಡಬೇಕಿತ್ತು. ಅದ ಬಿಟ್ಟು ಎರಡು ಹೊತ್ತಿನ ಕೂಳಿಗೋಸ್ಕರ ಚಿಲ್ರೆ ವ್ಯಾಪಾರ ಮಾಡ್ಕಳ್ಳಕ್ಕೆ ಬೀದಿಗೆ ಬಿಟ್ರೆ ಅವರೆಷ್ಟು ತಾನೆ ಸಂಪಾದ್ನೆ ಮಾಡಕಾಯ್ತದೆ? ರೈತಾಪಿ ಜನ್ರಿಗೆ ಆರ್ತಿಂಗ್ಳು ಹೊಲ, ಜಮೀನಾಗೆ ಕೆಲ್ಸ ಇಲ್ದಿರೋವಾಗ ರೆಟ್ಟೆ ಗಟ್ಟಿಮುಟ್ಟಾಗಿದ್ದ ಯುವಕರ್ಗೆ ಬೆವ್ರ ಸುರ್‍ಸಿ ದುಡಿಯೋದ ಕೆಲ್ಸ ಇಲ್ದಿದ್ರ ಬಾಯಾಗಮಣ್ಣೇ ಗತಿ. ವಯಸ್ಸಾಗ್ತಾ ಬಂದ್ರೂ ಹೀಗೆ ಕಾಲ ಕಳ್ಕೊಂಡ್ರ ಮುಂದೆ ಅವ್ರ ಮಕ್ಳ ಗತೀನೂ ಹೀಗೇ ಇದ್ರೆ ದೇಶ ಹೆಂಗೆ ಉದ್ಧಾರ ಆಗತ್ತೆ? ಇದು ಆಳೋವ್ರಿಗೆ ಗೊತ್ತಿದ್ದೂ, ಅಧಿಕಾರ ಬಂದ್ಮ್ಯಾಗ ಅದೆಷ್ಟು ಸಾಧ್ಯವೋ ಅಷ್ಟೂ ಆಸ್ತಿ, ಹಣ ಮಡ್ಕಳ್ಳಾದ್ರಾಗೇ, ಇಲ್ವ ಅವ್ರಗಾಗದವ್ರನ ಹೊಸಕಾಕೋದರಲ್ಲೇ ಕಾಲ ಕಳೀತಾರಂದ್ರೆ ಯಾರ ತಪ್ಪು? ಅವರ್ನ್ಯಾಕಂತೀ? ಸಾರು, ಇನ್ನೊಂದ ವಿಸ್ಯ, ನಾ ಪೇಪರ್ನಾಗೆ, ಟೀವಿನಾಗ ಸರ್ಕಾರಗ್ಳು ಆವತ್ತ್ನಿಂದ್ಲೂ ಯೋಳ್ಕಂಡ್ಬರ್ತಾನೇ ಇರ್ತಾರೆ-ನಾವ್ ಅಷ್ಟೊಂz ಉದ್ಯೋಗ ಸೃಷ್ಟಿ ಮಾಡೀವೀ ಅಂತ. ಆದ್ರೂನೇ ಅದೇ ಸರ್ಕಾರಗ್ಳು ಪ್ರತಿ ಎಲೆಕ್ಸನ್ನಾಗೂ ಬಡವ್ರು ಬಡವ್ರು ಅಂತಾನೇ ಜನಗಳ್ಗೆ ಬೀಪೀಎಲ್ ಅಂತ್ಲೋ, ಬಡವ್ರು ಅಂತ್ಲೋ ರೇಷನ್ ಕೊಡೋದೇನ, ಆ ಸವಲತ್ತು, ಈ ಸವಲತ್ತು ಅಂತ್ಯೋಳೀ ಏನೇನೋ ಕೊಟ್ಕಂತ ಬರ್ತಾನೇ ಅದಾರೆ, ಅದ್ರ ಇದೆಲ್ಲ ಏನ ಅವರ ಸ್ವಂತ ಆಸ್ತಿ ಅನ್ನೋತರ ಜನರಿಗೆ ಬೋ ಸಾಯ ಮಾಡೀವಿ ಅಂತ್ಯೋಳಿಕಂಡ್ತಿರುಗ್ತಾರೆ. ಅವ್ರು ಮಾತ್ರ ಗಂಟು ಮಾಡ್ಕಂಡು ರಾಜ್ಕೀಯಕ್ಕೆ ಬರೋ ಮುಂಚೆ ಅಷ್ಟೋ ಇಷ್ಟೋ ಮಡಿಕ್ಕಂಡಿದ್ದವ್ರು ಕೋಟಿಗಟ್ಟಲೆ ಆಸ್ತಿ ಮಾಡ್ಕಂಡಿ, ಮನೆ ಮಂದಿ ಜೊತೆಗೆ ಏರ್ ಕಂಡೀಷನ್ನಕಾರ್ನಾಗೆ ತಿರುಗ್ತಾರೆ. ಅದೆಂಗೆ ಸಾರು ಇವೆಲ್ಲಾ? ಪ್ರಜಾಪ್ರಭುತ್ವ ಅಂದ್ರ ಅರ್ಥಾನೇ ಆಗಕ್ಕಿಲ್ರ ಮೇಟ್ರೆ. ನೋಡು, ಇವೆಲ್ಲ ನಿನಗೆ ಗೊತ್ತಾಗ ಸಮಾಚಾರ ಅಲ್ಲ, ರಾಜಕಾರಣಿಗಳ ಜಾಡು ಅವ್ರಿಗೆ ವಿನಾ ಬೇರೆ ಯಾರ್ಗೂ ತಿಳಿಯಾಕಿಲ್ಲ, ಅವ್ರ ಕಷ್ಟ ನಿಂಗೇನ ಗೊತ್ತಾಗತ್ತೆ? ಅಧಿಕಾರದ್ಸೀಟು ಸಿಕ್ಮ್ಯಾಗೆ, ಅದನ್ಭದ್ರ ಮಾಡಾದರಲ್ಲೇ ಕಷ್ಟ ಪಡೋವ್ರು. ಅದಕ್ಕ ಬೇಕು ಮರ್ಜಿ, ನನ್ಗೂ ನಿನ್ಗೂ ಯಾಕೆ ಬೇಕು ಇದೆಲ್ಲಾ? ಅರ್ಥವಾಗೋದಂತೂ ಅಲ್ಲ. ಮತ್ತ ಈ ಪರಿಸ್ಥಿತಿಯೊಳಗ ಅವ್ರು ಜನಗೊಳ್ಗೆ ಏನೇನ, ಎಷ್ಟೆಷ್ಟು ಹೆಂಗ ತಾನೆ ಒಳ್ಳೇದ ಮಾಢ್ಲಿಕ್ಕ ಸಾಧ್ಯ ಸಾರು? ನೋಡು, ನೀ ಒಳ್ಳೇ ಪ್ರಶ್ನೆನ ಕೇಳ್ದೆ, ನಾನು ಸರ್ಕಾರೀ ಕೆಲ್ಸ ಮಾಡಾವ್ನು, ನೀನು ಪ್ರೈವೇಟಾಗಿ ಉದ್ಯೋಗ ಸೃಷ್ಟಿಸ್ಕಂಡು ನಾಕು ಜನಗೋಳ್ಗೆ ಕೆಲ್ಸ ಕೊಟ್ಟು, ಊಟ ಕೊಟ್ಟು ದುಡ್ಕಂಡಿದೀಯ ನಿನ್ಕಾಲ್ಮ್ಯಾಗೇ ನಿಂತು. ಸರ್ಕಾರದ್ ಕಾಂಟ್ರಾಕ್ಟ್, ¥ರ್ಮಿಟ್ ತಗಂಡು ಕೆಲ್ಸ ಮಾಡವಾಗ ಸರ್ಕಾರದ್ ಒಪ್ಪಿಗೆ ಏನಾರ ತಗಾಬೇಕಿದ್ರೆ, ಲಂಚ ಕೇಳೋವ್ರಿದ್ರ್ರೆ-ಸರ್ಕಾದಾಗ ಎಲ್ಲಿ ತಾನೆ ಇಲ್ಲ? ಅಲ್ಲಿ ಕಚೇರಿ ಅಂದ್ರ ಕುರ್ಚಿಗಳೂ ಲಂಚ ಕೇಳ್ತಾವ, ಅಂತ್ ಮಾತಾಡ್ಕಳ್ಳಾದ ಕೇಳೀದೀ-ಅವ್ರಿಗೆ ನೀ ಕದ್ದು ಮುಚ್ಚಿ ಕೊಡಲೇಬೇಕಾದ್ರ, ಅವ್ರಿಂದ ಮೇಲ್ನ ಅಧಿಕಾರಿಗೊಳೂ, ರಾಜ್ಕೀಯದವ್ರಗೂ ಆ ಹಣ ಹಂಚೋದಾದ್ರ ನೀ ಲಂಚ ಕೊಟ್ಟಂಗೆನೇವೆ. ಅಲ್ಲಿ ಸರ್ಕಾರ, ಇಲ್ಲಿ ನೀನು, ದೇಶಕ್ಕೆ ಇಬ್ರೂನೂವೆ ಅತ್ಯಾಚಾರ ಮಾಡ್ದಂಗೇನೇವೆಯ, ಪರ್ಮಿಟ್ ತಗಳ್ಳಾವ್ನು, ಲೈಸೆನ್ಸ್ ಕೊಡಾವ್ನು ಇಬ್ರೂ ದೇಶಕ್ಕ ವಿಷಾನೆವೆಯ. ಇದು ರಾಜಾಜಿ ಅಂತವ್ರು ಸ್ವಾತಂತ್ರ್ಯ ಬಂದಾಗ್ಲಿಂದಿವಸ್ದಿಂದಾ ಮೊದಲನೆ ಪ್ರಧಾನಿ ಕಾಲ್ದಿಂದ್ಲೂ ಹೇಳ್ಕಂಡ್ ಬಂದ್ರೂನ, ಸರ್ಕಾರಗ್ಳೂ ಇದಕ್ಕ ಕಿವೀನೇ ಕೊಡಲಿಲ್ಲ, ಅದನ್ನೇ ಮುಂದ್ವರ್ಸಿದ್ಕಾರ್ಣ ದೇಶ ಇಂದು ಯೆಕ್ಕುಟ್ಕುಂಡ್ ಹೋಗೋಂಥ ಪರಿಸ್ಥಿತಿ ತಲ್ಪಿರೋದ. ಮತಾಂಧ್ರೂ ಅಂತ ಯಾರ್ನ ಕರ್ಕಂಡು ಊರ್ನಾಗೆಲ್ಲ ಪ್ರಚಾರ ಗಿಟ್ಟಿಸ್ಕೊಳ್ತಾ ಇದಾರೋ ಅವ್ರೇನೂವೆಯಾ ಅದೇ ಆಗೋಗಿರೋದ ನಿಜಾನ, ಸುಳ್ಳ? ಜನಾಗೋಳ್ನ ಜಾತಿ ಮ್ಯಾಕೆ ಹಂಚಿ, ಅವರ್ನ ಬೇರೆ ಬೇರ್ಬೇರೆ ಗುಂಪುಗಳಾಗಿ ಮಾಡ್ಕಂಡು ವೋಟು ತಗಳ್ತಾ ಅವ್ರಲ್ಲ, ಕೆಲವ್ರು,ಅದಕ್ಕೇನ ನೀ ಮಾಡೀಯ? ನಿಜ, ಮೇಟ್ರೇ, ನಿಜಾನೇ ಸಾರೂ, ಜಾತಿಗಳ್ನ ಪರಸ್ಪರ ದ್ವೇಸ ಮಾಡಕಳ್ಳಾಂಗ್ಮಾಡಿ, ಜನ ವೋಟು ಯೋಸ್ನೆ ಮಾಡಿ ಒಳ್ಳೇಯವ ಯಾವೋನೋ ಅವನ್ಗೆ ಜೈ ಅನ್ನಾದ ಬಿಟ್ ತಮ್ಮ ಜಾತಿನವ ಯಾರ ಅಂತ ಹುಡಕ್ಕಂಡ್ ವೋಟ ಹಾಕೋದ, ಅಲ್ದ ಎಲಕ್ಷನ್ ಟೈಂನಾಗೆ ನೋಟು, ಹೆಂಡ, ಸೀರೆ, ಕಣ, ಟೀವಿ, ಸ್ಟೊವ್ವು, ಬಿರ್ಯಾನಿ ಊಟ, ಅದು, ಇದು ಹೀಗೆ ಇತ್ಯಾದಿ ಮುಫತ್ಕೊಡಾವ್ನಿಗೆ ಓಟು ಹಾಕವ್ರಿದ್ರ ಪ್ರಜಾಪ್ರಭುತ್ವ ಎಕ್ಕುಟ್ಕೊಂಡಾಗೋದಲ್ದೆ ಇನ್ನೇನ ಆಗ್ಲಿಕ್ ಸಾಧ್ಯ? ಅದಕ ಪರ್ಮೇಶಿ, ಇದೆಲ್ಲ ಯಾರ ತಪ್ಪ? ವೋಟು ಹಾಕವಾಗ ದೇಶದ ಆಭಿವೃದ್ಧಿ ಬಗ್ಗೆ ಯಾರು ಕೆಲ್ಸ ಮಾಡ್ತಾರ, ಅವ್ರಿಗೇ ವೋಟು, ಅಂತ ಮುಂದೆ ಮತ್ತ ನಾವು ಯಾರ ಗುಲಾಮರಾಗಬಾರ್ದುಂತ ಯೋಚ್ನೆ ಮಾಡ ಕಾಲ ಬರೋತನ್ಕ ………..ಆ ದಿನಾ ಬರೋದ ಯಾವಾಗ? ಸದ್ಯಕ್ಕಂತೂ ನಮ್ಕಣ್ಣ್ ಮಂಜಾಗಿ ಹೋಗೇದ, ಹೋಗ್ಲಿ ಬಿಡು, ತಲೆ ಕೆರ್ಕಂಡಷ್ಟೂ ತಲೆಗ ನೋವಷ್ಟೆ ಜಾಸ್ತಿ, ಮಂಡೆ ಬಿಸಿ ಮಾಡ್ಕಳ್ಳಾದಿಂದ್ರ ಏನೂ ಆಗಕಿಲ್ಲ, ಹಂಡೆ ನೀರೂ ಕಾಯದಿಲ್ಲ. ಹೌದ್ರ, ನೀವ್ಯೋಳಿದ್ ನೆತ್ತಿಮ್ಯಾಕೆ ಗಂಟೆ ಹೊಡದಂಗೇ ಆಗದೆ. ವೋಟು ತಗಳ್ಳಾವ್ನಿಗೂ, ವೋಟು ಕೊಡಾವನಿಗೂ ನಮ್ದೇಶ, ನಮ್ಮಜನ, ನಮ್ಸ್ವಾತಂತ್ರ್ಯ ಅಂತಾ…… ಬಿಡಿ ಅತ್ಲಾಗ, ಪೂಜಾರಿ ಮಾತ್ಕೇಳ್ಕಂಡ್ ದೇವ್ರ ಮುಂದೆ ಬಲಿಗೊಸ್ಕರ ನಮ್ತಲಿ ಕೊಟ್ಟಂಗ್ ಆಗ್ಯಾದ ನಮ್ಮ ಪಾಡು. ಪೂಜಾರಯ್ಯನ್ನೂ ನಾವ್ತಾನೇ ದೇವ್ರ ಮುಂದ ಕೂಡಿಸದ್ದ ಅವ್ನಗೆಲ್ಲಾ ಸವಲತ್ತು ಕೊಟ್ಟು?….ನಾ ಬತ್ತೀನಿ ಸಾರು, ಇನ್ನೊಂದ ಬಾರಿ ಈ ಕಡೆ ಬಂದಾಗ ರಾಜ್ಕೀಯ ಬಿಟ್ ಮತ್ತಿನ್ನೇನಾದ್ರೂ ಮಾತಾಡಾವ, ಆ ಟೈಂನಾಗ ಆಡಳಿತ ಯೆಂಗಿರ್ತೈತೋ ಯಾರ್ಬಲ್ರು? ವೋಟುಕೊಟ್ಟಮ್ಯಾಗೆ ಮಾತಾಡ್ಲಿಕ್ಕೂ ಲೈಸೆನ್ಸ ಇರ್ಬೇಕು ಅನ್ನೋ ಪರಿಸ್ಥಿತಿ ಬಂದ್ರ ಏನ್ಮಾಡಂಗಿದೀವಿ? ಹಂಗಾಗೋದ ಬ್ಯಾಡ ಅಂತೀನಿ, ಯೋನಂತೀರಿ? ಆಶೀರ್ವಾದ ಮಾಡ್ರಿ ಸಾರು ಈ ನಿಮ್ಶಿಷ್ಯನ್ಗೆ ಅಡಿಬಿದ್ದೆ ಗುರ್ಗೋಳ್ಗೆ.




Comments