ಕಂಡೆನಾದಿನ ಒಬ್ಬ ಕೋಮಲೆಯಾ ….
- hrhrau
- Jul 6, 2023
- 1 min read
---ಕಂಡೆನಾದಿನ ಒಬ್ಬ ಕೋಮಲೆಯಾ ….
ಕಂಡೆನಾದಿನಾ ಸುಂದರಿಯೊಬ್ಬಳನು
ಮಧುರ ಮಧುರ ಬಳುಕುಗಾತಿಯನು
ಕಣ್ಣ ರೆಪ್ಪೆ ಮುಚ್ಚದೆ, ಅವಳ ನಡುಗೆಯನು
ಕೋಮಲ, ಕೋಮಲ ಸುಂದರಿ,ವೈಯ್ಯಾರಿಯನು (೧)
ಕಂಡೆನಾದಿನಾ ಒಂದು ಸುಂದರ
ಸುಮಬಾಲೆಯೊಬ್ಬಳನ ಬಾಳೆ ತೋಟದ ನಡುವಿನಲಿ ನಡು ಬಳುಕುತಲಿ ಅತಿ ವೈಯಾರದಲಿ. (೨) ಕಂಡಲವಳೆನ್ನ ಕಣ್ಣಿಗೆ ಸುರಸುಂದರಿ. ನಡು ಸಣ್ಣ, ಬಿಳಿ ಬಣ್ಣ, ಸುಂದರ ಮುಖಾರವಿಂದ ಕನ್ನೈದಿಲೆಗಿಂತ ಚೆಂದ ಚೂತವನಕೆಲ್ಲಇವಳೇ ಬಹುವೇ ಅಂದ (೩) ದೂರದಿಂದಲೇ ನಾ ಕಂಡ ಈ ಲತಾಂಗಿ ಸಿಂಹಕಟಿಯ ಕೋಮಲೆ ಬಂದಳೇಕಿಲ್ಲಿಗೆ ಯಾರ ಮನೆಯವಳೋ ಏನೋ ಎಂತೋ ಕಣ್ಣಿಗಿಂಪು ಮನಕೆ ತಂಪು ಕೊಟ್ಟಳೋ. (೪) ಬೇಡ ಬೇಡವೆಂದರೂ ಎರಡೂ ಕಣ್ಣಿಗೆ ತಂಪನೆರಚಿ ಎನ್ನ ಹೃದಯ ಕದ್ದು ಅದನ ಮೀಂಟುತಿರುವಳೋ, ಹೇಗೋ ಎಂತೋ ಎನ್ನ ಮನವ ಸೂರೆಗೊಳ್ಳಲು ಬಂದಳೋ (೫) . ಮೆಲ್ಲಮೆಲ್ಲಗೆ ನಡೆದು ಬಂದು, ನಾನವಳ ಬೆನ್ನ ಹತ್ತಿರ ಬಂದು ನಿಂದೆನೋ, ಹಿಂತಿರುಗಿ ನೋಡ ಲಿಲ್ಲವಳು, ಅವಳ ನೋಟ ಕೆಂಡಸಂಪಿಗೆಯತ್ತ
ಹೂವಿನತ್ತ, ನನ್ನ ಚಿತ್ತ ಕೋಮಲಾಂಗಿಯತ್ತ. (೬) ಮೈಗೊಪ್ಪುವ ಬಣ್ಣದಾ ಸೀರೆ ಹಣೆಯ ಮೇಲೆ ದೃಷ್ಟಿ ಚುಕ್ಕೆ, ನೋಡುವರಾ ಕಣ್ಣಿಗೆ ಹುಣ್ಣಿಮೆ. ಸಂಪಿಗೆಯ ನೋಡುನೋಡುತಾ ತಿರುಗಿದಳೆನ್ನತ್ತ ನಾ ಸೋತು ಹೋದೆ, ಅವಳ ದೃಷ್ಟಿ ಎನ್ನದೆಗೆ ನಾಟಿ . (೭) ನೋಡುನೋಡುತಾ, ಕೋಪದಿಂದ ಎನ್ನ ಕಂಡು ಕ್ಷಣ ಬಾಯಿ ತೆರೆದು ಏನು ಮಾತಾಡಲೊಲ್ಲದೆ ಎರಡು ಹೆಜ್ಜೆ ಅಲ್ಲಿಂದ ದೂರ ಸರಿದು ನಿಂತಳೋ ಹೀಗೆ ನೀ ಭಯವ ಪುಟ್ಟಿಸುವದ ಸರಿಯಲ್ಲವೆಂದಳೋ. (೮) ಎನಗೆ ಮಾತೆ ಹೊರಡಲೊಲ್ಲದ್ಯಾಕೋ ಏನೋ (8) ಎನ್ನ ಮನದಿ ನಿಂತ ಈ ಹೆಣ್ಣಿಗೇನ ಹೇಳಲುತ್ತರ ಹೃದಯ ಕದ್ದರೂಪಸಿ ನೀನೆಂದು ಹೇಳಲೇನು ಅವಳು ಕೋಪದಿಂದ ಹಿಂತಿರುಗಿ ಹೋದರೇನ? (9) ಒಂದೆರಡು ಕ್ಷಣ ಕಣ್ಣ ಮುಚ್ಚಿ ಸುಮ್ಮನಾದೆ ಯಾಕೊ, ಏನೋ ಭೀತರ, ಹೇಳಲೇನು ನಿಜವ ಬೇಡ ಬೇಡ, ಇವಳ ಮಾತು ಮಧುರ,ಆದರೇನು ಇನ್ಯಾರ ಹೆಣ್ಣೋ, ಯಾರ ಪ್ರೀತಿ ಪ್ರೇಮದಾ ಕನ್ಯೆಯೋ (೧೦). ......... ಕಣ್ಣ ತೆರೆದೆ, ನೋಡು ನೋಡುತಾ, ಅವಳೇ ಮಾಯ, ಅಲ್ಲು ಇಲ್ಲಾ ಎಲ್ಲೂ ಇಲ್ಲಾ, ಎಲ್ಲಿಗೆ ಮಾಯವಾದಳೋ ಈ ರೂಪಸಿ, ಅಲ್ಲ ಅಪ್ಸರೆ, ಕಂಡೂಕಾಣದಂತೆ ಶೂನ್ಯದಲ್ಲಿ ಮಾಯವಾಗಿ ಹೋದಳೋ.---------------------- ......
Comments