ಸತ್ಯಮೇವ ಜಯತೇ
- haparna
- Nov 9, 2016
- 4 min read
ಸತ್ಯಮೇವ ಜಯತೇ . ಲೇಖಕ:ಎಚ್. ಆರ್. ಹನುಮಂತ ರಾವ್, ——————————————————————- ‘ಸತ್ಯಕ್ಕೆ ಸಾವಿಲ್ಲ ಎಂದೆಂದಿಗೂ, ಸತ್ಯಮೇವ ಜಯತೇ ….’ ನಾನು: ಹಾಗ೦ದವ್ರು ಯಾರು? ಗಾಂಧೀನಾ, ಆ ವಿಶ್ವಾಮಿತ್ರನಾ ಅಥವಾ… ಅವರು: ರೀ, ಸ್ವಾಮಿ, ಗಾಂಧಿ ಸತ್ತೇ ಏಟೇಟೊ ವರ್ಸ್ಗಳೇ ಆಗೋಗದೆ, ಬಿಡಿ ಅತ್ಲಾಗೆ, ಈ ದಿನ್ಗಳ ಪೇಪರುಗಳ್ನ, ಓ ಗ್ಲಿ ಅದು ಬೇಡ, ಇಂಗ್ಲಿಷ್ ಟಿವಿ ನ್ಯೂಸ್ ಚಾನೆಲ್ಗಳನ್ನಾದ್ರು ನೋಡೋದಿಲ್ವ? ಪಾಕಿಸ್ತಾನದ ಹುಗ್ರರುಗಳನ್ನ ಒಳಗೆ ನುಗ್ಗಿ ನಮ್ಮ ಸೈನಿಕರು ಸದೆಬಡಿದ್ರು ಅನ್ನೋಸುದ್ಧಿ ಬಂಡೆಲ್ಲು, ಮೋದಿ ಹೇಳಿದ್ದು, ಹೇಳ್ದೆ ಬಿಟ್ಟದ್ದು, ಎಲ್ಲಾ ಬಂಡೆಲ್ಲು, ಸತ್ಯ ಅದಲ್ಲ, ನಿಜಾನೆ ಬೇರೆ ಅಯ್ತೆ, ಅ೦ತ ಯೋಳಿ ಕರ್ಜಿವಾಲಾ ಗುರು ದಿಲ್ಲಿನಾಗ ಹಾಗು ದೊಡ್ಡ್ ದೊಡ್ಡ್ ಪತ್ರಿಕಾ ಏಜೇಂಟ್ಸಗಳು, ಬೊಂಬಾಯಿವಾಲಾ ಕಲಾವಿದರುಗಳು ಹಲವ್ರು, ಡೈರೆಕ್ಟರುಗೋಳೆನ್ಸಿಕೊಂಡವ್ರೊಬ್ಬಿಬ್ಬರು, ಎಲ್ಲ ಸೇರಿ ಬೈಕಂತಾವ್ರೆ ಅನ್ನೋದ್ ಗೊತ್ತಾಕಿಲ್ವೇನ್ರಪಾ? ಗಾಂಧಿ ಊರನ್ನಾಗೇ ಹುಟ್ಟದಾಕ್ಷಣ ಮೋದಿ ಮಹಾತ್ಮಾ ಗಾಂಧಿ ಆಗಕ್ಕಾಗ್ತದೇನ್ರಪಾ? ಇವರು: ಅಂಗಾದ್ರೆ ಎಲ್ಲ ಸುಳ್ಳು ಅನ್ನಿ, ಸರ್ಕಾರ ಸುಳ್ಳು ಹೇಳಾದ ನಿಜ ಆ೦ದ್ರೆ, ಸುಳ್ಳು ಅಂಥೇಳಾವ್ರ ಮಾತು ನಿಜಾನ ?ಯಾವ್ದಪ್ಪ ಸರಿ? ಬೋ ಕನ್ಫ್ಯೂಜ್ ಮಾಡ್ತಾರಲ್ಲ, ಸರ್ಯಾಗ್ ಹೇಳ್ರಪಾ? ನಾನು: ನಾ ಪೇಪರ ಓದೇ ಹೇಳ್ತಿದೀನಿ, ಹಿಂಗಿದೆ ಸಮಾಚಾರ. ಈ ಗ್ರೂಪ್ನಗಿರೋ ಜನಾ ಸತ್ಯ ಅಂತ ಹೇಳೋದ್ ಏನಂದ್ರೆ ಮೋದಿ ಬರಿ ನಾಟ್ಕ ಆಡಕಂಡ್ ನಮ್ಗೆಲ್ಲಾ ಮ೦ಕ್ಬೂದಿ ಎರಚತವ್ರೇ, ನಂಕೈಲಿ ಏನೂ ಕಿಸಿತಾ ಇಲ್ಲ, ನಾವ್ಗಳು ಪಾಕಿಸ್ತಾನದ ಒಳಗಿಂದ ಸುದ್ಧಿ ಒರಿಜಿನಲ್ ಆಗಿ ತಂದೇವಿ, ನಮ್ಮನ್ ನಂಬ್ರಿ. ಅದಕ್ಕೇರಿ ಈ ಶಿರೋನಾಮೆ ‘ಸತ್ಯಮೇವ ಜಯತೇ’ ಅನ್ನೋದ. ಅರ್ಥವಾಯಿತಾ? ಅವರು: ಅದೆಲ್ಲ ಒತ್ತಟ್ಗಿರಲಿ, ಇವೃಗೊಳ ವಿಷ್ಯ ಬಿಡಿ, ನಾ ಏನ ಹೇಳೋದಂದ್ರೆ ನಮ್ಮ ದಿನನಿತ್ಯದ ಜೀವನದಾಗೆ ಕೂಡ ಅಸತ್ಯ ಆಗೋಗ್ತಾವೆ. ಇವರು: ನಿವ್ಹೇಳೋ ಸತ್ಯ ಗೊತ್ತು ಬಿಡ್ರಿ, ಶ್ರೀ ಕೃಷ್ಣಾ ಮಠದಲ್ಲಿ ಜಯತೀರ್ಥಾಚರ್ಯರ ಹರಿಕಥೆ ಕೇಳಿಬಂದ ನಮ್ಮ ಮೂಲೆ ಮನೆ ಸೀತಮ್ಮ ಅಂಥವರುಗೋಳು ಹೇಳಿದ್ದಿರಬೇಕು. ಅಲ್ಲಿ ಅಕ್ಪಕ್ಕದವರ ಜೊತೆ ಮಾತಾಡ್ಕಂಡು ಕೇಳಿದ್ದು ಒಂದು, ಇಲ್ಲಿ ಬಂದ್ ಹೇಳಾದ್ ಇನ್ನೊಂದು. ಅಂಥವರ ಬಗ್ಗೆ ನೀವ್ ಹೇಳೋದ್ ತಾನೇ? ಇನ್ನೊಬ್ರು: ಅವ್ರು ಅಲ್ದಿದ್ರೆ, ಸ್ವಾತಂತ್ರೋತ್ಸವದ ದಿನ ಜನಗಳಿಗೆ ಬುದ್ಧಿ ಹೇಳಿ, ಜ್ಞಾನೋದಯ ಮಾಡಿಸಿದ ನಮ್ಮ ಮರಿ ಲೀಡರುಗಳು, ಒಂದ್ಕಾಲಕ್ಕೆ ಮಂತ್ರಿಗಳು ಆಗೇ ಆಗ್ತೀವೀ ಅಂದ್ಕಂಡಿರೋ ಗಾಂಧಿ ಪಕ್ಷದ್ ಶರಭಣ್ಣ-ಭರಮಣ್ಣಗಳೂ. ಇವರು:ಏನಂತ ಜ್ಞಾನೋದಯ ಮಾಡಿಸಿದರು? ಸತ್ಯಕ್ಕೂ ಅವ್ರ ಮಾತಿಗೂ ಏನರ ಸಂಬಂಧ ಇದೆ? ಅವರು: ಇದೇರಿ, ಅವ್ರ ಭಾಷಣ ಕೇಳಿ ನಮಗೆ ಖುಷಿಯಾಗೋಯ್ತು ರೀ, ಅದೇನ್ ತಿಳ್ಕ೦ಡವ್ರೆ. ಕೇಳೀ, “ಮಾನೀಯರೇ, ಮಾಯಿಳೇಗಲೇ , ಈ ದಿನ ಅಂದ್ರ ಸ್ವಾತಂತ್ರಾ ಕೈಗ ಬ೦ದಾಗಾಯ್ತಲ್ಲ ಆಗಲಿಂದಾ, ಯಾವಾಗ? ಅದು ನಿಮಗೆ ಗೊತ್ತು೦ಟು ಆಲ್ಲವ್ರ? ನಂಕೈನಾಗೆ ಆಯ್ತೆ ಎಂಗೆ ಕಾಪಾಡ್ಕಾಬೇಕಾ, ಹ್ಯಾಗ ಮೇಲಕ್ಕೆತ್ತಿ ಈ ದೇಸಾನ ಮಡಕ್ಕಾಬೇಕಾ ಅವೆಲ್ಲ, ನಾವ್ ನೀವ್ ,ಆ ಮಕ್ಕಳ್ಳು ಅಲ್ಕುಂತಿವೆಯಲ್ಲಾ, ಈ ಎಲ್ಲಾ ಸೆರ್ ಕಂಡ್, ಅಷ್ಟು ಗೊತ್ತಾಗಕಿಲ್ವೇನರಪಾ? ಈ ದೇಸಾನ ಎತ್ತಬೇಕಾಗದ, ಎಲ್ಲಿಗೆ? ಎಲ್ಲಿಗೆ ಅಂದ್ರ ಮೇಲಕ್ಕಪ್ಪ, ಇದೀಗ ಮಾತಿಗೆ ಹೇಳತೀನಿ, ಆ ಅಮೀರಕಪ್ಪ, ಆ ಇಂಗ್ಲಿಸಪ್ಪ, ಅಥವಾ ಆ ರಸ್ಯಾವಪ್ಪಾ, ಈ ಎಲ್ಲಾರು ನಮ್ಮನ ಕಸಕ್ಕಿಂತ ಕಡೆ ಮಾಡವ್ರೆ, ನಿ೦ಗೊತ್ತಾತಾ? ನಾನ್ ಅಲ್ಲೆಲ್ಲಾ ಹೋಗಿ ನೋಡಿಕಂಡ್ ಬಂದೀನಿ. ಅವ್ರೆಲ್ಲಾ ಅಲ್ಲಿ ಕಾರು, ಅದು, ಇದು ಎಲ್ಲ ಮಡಿಕ್ಕಂಡ್ ನಮ್ಮಿ೦ದ್ಲೆ ತಗಂಡ್ ನಂಗಿಂತಾ ಜೋರಾಗ್ ಮಜಾ ಮಾಡಿಕಂತಾವ್ರೆ. ಅವ್ರಿಗೆಲ್ಲಾ ನಾನೊಬ್ಬನೇ ಬುದ್ಧಿ ಕಲ್ಸಿಲಿಕ್ಕ ಸಾಕು, ನನ್ನ ಯೋಗಯತೆ ತೋರಿಸಲಿಕ್ಕೆ. ನಮ್ಮ ಆಪೋಜಿಶನ್ ಪಾರ್ಟೀ ಅವ್ರು ನಮ್ಮನ್ ಏನೇನೋ ಅಂತಾರೆ, ಕಾಲೆಳಯಲಿಕ್ಬಾರ್ತಾ ರೆ, ಅದ್ಕೆಲ್ಲಾ ಸೊಪ್ಪು ನೀವು ಹಾಕ್ಬ್ಯಾಡ್ರಿ. ಆದ್ರ ಗಾಂಧಿ ನಮಗೆಲ್ಲ ಅಪ್ಪಣೆ ಮಾಡವ್ರೆ ಆವತ್ತೇ, ಸಾಯೊಕ್ಕ ಮುಂಚೆನೆವ -ಏನ್ ಗೊತ್ತಾ? ಇದು ಜನಗೊಳಿಂದ ಬರ್ಬೇಕಾ, ಆಗ್ಲೇ ಜನಗೊಳ್ಗೆ ಸ್ವಾತಂತ್ರ ಅಂದ್ರ ಏನ ಅನ್ನೋದ ತಿಳಿತದಾ, ಅದ್ಕೊಸ್ಕರ ನೀವು, ನಿಮ್ಮಪಾರ್ಟಿ ಜನಗೊಳ್ ಊರೂರ ಸುತ್ಕೊತಾ ಜನರ್ಗೆ ಬುದ್ಧಿ ಹಚ್ಬೇಕು, ಈ ಕೆಲಸ ಜರೂರು ಆಗ್ಬೇಕು, ಹೋಗ್ರಿ, ನೀವ್ ಪ್ರಚಾರ ಮಾಡಿಕಂಬನ್ನಿ, ಏನಂತಾ? ಸತ್ಯಕ್ಕೆ ಸಾವಿಲ್ಲ, ಸತ್ಯ ನಿತ್ಯ, ನಿತ್ಯಾನೇ ಸತ್ಯ. ಆ ಹೌದುರಿ ‘ಸತ್ಯಮೇವ ಜಾಯ್ತೆ’. ನೀವೆಲ್ಲಾ ಅಂಗೇ ಬದಕಬೇಕಾ.’ ಅಂತ. ನಾವ್ ಹೇಂಗಾರ್ ಇದ್ರೂ, ನಿವ್ಮಾತ್ರ ಗಾಂಧಿ ಯೊಲ್ದಂಗಿರ್ಬೇಕ್. ಬುದ್ಧಿ ಕಲಸಿಲಿಕ್ಕ ನಾವ್ಬೇಕು, ಬೇಕೇ ಬೇಕು, ಹೇಳ್ರಪಾ ಎಲ್ಲಾ ಜೋರಾಗಿ ನಂದೇಸಾ ಕಿ ಜೈ ಜೈ ,ಭಾರತಾಕಿ ಜೈ .. ಹಾಂಗಾ ಈಗ ಗೊತ್ತಾತಲ್ಲ, ಈ ದೇಶ ಮೇಲಕ್ಕಿರ್ಬೇಕಾ. ಅದಕ, ನಾವೇನ್ ಮಾಡ್ಬೇಕಾ? ನೀವುಗಳಿಗೆ, ಓದ್ಕ್೦ಡ ಕೆಲವರಿಗೆ ಈ ಗಾಂಧಿ ಬಗ್ಗೆ ರವಷ್ಟು ಗೊತ್ತು೦ಟು- ಮಾತ್ಮಾ ಗಾಂಧಿ ರಸ್ತೆ ಅಲ್ರಪಾ ನಾ ಯೋಳ್ತಾ ಇರೋದ; ಈ ಓದ್ದವ್ರ ಕಥಿನು ಒಂತರ, ಆ ನಿಜವಾದ ಮಾತ್ಮಾ ಕಣ್ರಪೋ, ಆದ್ರ ಅಲ್ಲಿ ನೋಡಿ ಆ ಮರಿಗಾಳು, ಆಟ ಆಡ್ಕಳಾವು, ಅವಕ್ಕ ಗಾಂಧಿ ಅಂದ್ರ ‘ಏನದ, ಬಣ್ಣ ಏನ, ಎಂಗಿರ್ತದಾ ಅಂತಾ ಕೇಳಲಿಕ್ಕ ಹತ್ಯಾವ, ಗೊತಾತೇನ್ರೀ? ಅದಕ್ಕ, ನಾವು, ನೀವು ಎಲ್ಲಾ ಸೇರ್ಕಂಡ್ ಏನ್ಮಾಡ್ಬೇಕಾ? ಹೆಗಲ ಕೊಡಬೇಕ್ರಿ, ಹೆಗಲ, ಇಲ್ದಿದ್ರ ಮೇಲಕ್ಕೆ ಹೋಗಾದ ತಾನೇ ಹೇಂಗಾಪಾ? ನೀವೇ ಹೇಳ್ರಲಾ. ಸತ್ಯವಾಗ್ತದ ಗಾಂಧಿ ಯೋಳಿದ್ದ. ದೇಶಕ್ಕೆ ಅಂತ ಹೆಗಲ್ಗ ಹೆಗಲ ಕೊಡ್ರಿ, ಭುಜಕ್ಕ ಭುಜ ಕೊಡ್ರಿ. ಆಗ ನೋಡ್ರಪಾ ನಮ ದೇಸಾ ಎಂಗಾಗೋಯ್ತದೆ. ಜೈ ಭುವನೇಸ್ವರಿ, ಜೈ ಬಾರತ. ಆ ಇನ್ನೊಂದ್ಮಾತು ನಾ ಯೋಳಾದ್ ಮರ್ತಿದ್ದೆ. ನಂ ಸರ್ಕಾರ ಬಡವ್ರಗಾಗಿ ಅಂತ ಏನೇನೋ ಪ್ಲಾನ್ ಮಾಡೀವಿ, ಹೂ ಡ್ ಮನಿಸ್ಟರು ಅಲ್ಲಲ್ಲ ಫುಡ್ ಮಿನಿಸ್ಟರ್ ಬಹಳಾನೇ ಕಷ್ಟಪಟ್ ಎಲ್ಲೆಲ್ಲಿಂದ್ಲೋ ಅಕ್ಕಿ, ರಾಗಿ, ಜೋಳ ತಂತಂದು ಹಾಕ್ತಾವ್ರೆ, ನೀವ್ ಚೆನ್ನಾಗಿದ್ರೆ ತಾನೇ ನಾವು ಚೆನ್ನಾಗಿರೋದ್, ಆಗ ಗಾಂಧಿ ಆತ್ಮಕ್ಕ ಸಾಂತಿ ಸಿಗೋದ, ಈಗ ಹೇಳ್ರಲಾ, ಎಲ್ಲಾ ಜೈ ಮಾತ್ಮಾ ಗಾಂಧಿಕಿ, ಜೈ, ಸತ್ಯಮೇವ… ಬೇಡ ಬಿಡ್ರಿ, ಎಲ್ಲರಿಗೂ ಬಾಯ್ ತಿರ್ಗಾಕಿಲ್ಲ, ”. ಆವರು: ಗಾಂಧಿನೂ ಅಲ್ಲ ಅಂದಿದ್ರೆ ಮತ್ತೆ ನ೦ತಾತ, ಮುತ್ತಾತ ಅಂಥವ್ರುಗೋಳು ಅನ್ಕಂಡಿದ್ದುದ್ದು-ಆಆಆಗ, ಈಗಿನ ಕಾಲಕ್ಕಲ್ಲ. ನಾನು:ಅಷ್ಟಕ್ಕೇ ನೀವು ಹಾಂಗೆ ಮಾತಾಡೋದಾ? ರೀ ನಿಮ್ಗೆಲ್ಲಾ ಏನಾಗಿದೆ ಅಂತೀನಿ, ಕಾಲ ಎಂಥದು ಏನ್ಕಥೆ, ಹೀಗೆ ನಿವೀದ್ಬಿಟ್ರೆ ನಾವುಗಳೆಲ್ಲಾ ಎಕ್ಕುಟ್ಕಂಡ್ ಹೋಗ್ತಿರೋದ. ಅವರು: ಒಂದ್ವಿಷ್ಯ ತಿಳ್ಕಳಿ, ಯಾವ್ದು ಒಂದೇ ತರಾ ಇರ್ಲಿಕ್ಕ ಸಾಧ್ಯವಾಗಲ್ಲ, ಕಾಲಕ್ಕೆ ತಕ್ಕಂತೆ ಚೇಂಜ್ ಆಗ್ಲೇ ಬೇಕು, ಅಷ್ಟೂ ಗೊತ್ತಿಲ್ವೇನ್ರಿ, ಹಾಡೇ ಇದೆ ‘ಕಾಲಕ್ಕೆ ತಕ್ಕಂತೆ ಕುಣಿಯಬೇಕು’. ಬೇಕಿದ್ರೆ ರಾಜ್ಕುಮಾರ್ನ ಒಂದಫ ಕೆಳ್ಕಂಬನ್ನಿ. ಇವರು: ಹಾಗಂತ ಅವರು ಡೈವರ್ಸ್ ಮಾಡಿದ್ರು ಅಂದ್ರೆ ನೀವು ಮಾಡ್ಬಿಡೋದೇನ್ರಿ, ಅಲ್ಲಿಗೆ ಹೊಸದಾಗಿ ಬಂದು ಸೇರಿಕೊಂಡ ಮತ್ತೊಬ್ಬರು: ಗುರುಗೋಳೇ, ಮತ್ತಿನ್ನೇನ್ತಾನೆ ಮಾಡಕ್ಕಾಯ್ತದೆ? ಕೇಳಿಲ್ವಾ ನಮ್ಮ ಬುದ್ಧಿ ಜೀವಿಗಳೆನ್ಸಿಕೊಂಡವರ ಪೈಕಿ ಹಲವರು ಏನ ಹೇಳೋದಾ? ನಿಮ್ಮ ಮಹಾಭಾರತ, ರಾಮಾಯಣ, ಭಗವದ್ಗೀತೆ ಅತ್ಲಾಗೆ ಒಗೀರೀ, ನಿಮಗೇನಾರ ಸ್ವಲ್ಪನಾದ್ರು ಮಂಡೇನಾಗಿದ್ರ, ಈ ಸಂಸ್ಕೃತಿನೇ ಸರಿ ಇಲ್ಲಾ, ದನದ ಮಾಂಸ, ಕೋಳಿ ಮಾಂಸ ಎಲ್ಲ ಒಂದೇಯಾ, ಮತ್ಯಾಕ ನೀವು ದನ, ದನ, ಗೋವು ಅಂತ ಬೇಧ ಮಾಡ್ಲಿಕ್ಕ ಹತ್ಯಾರಿ? ಸೂಟು, ಬೂಟು ಎಲ್ಲ ಹಾಕ್ಕ೦ತೀರಿ, ದೇವಸ್ತಾನದ್ಯಾಗ ಹೋದ್ರ ಎಲ್ಲಿಲದ್ ಮಡಿ, ಅಂತೀರಿ? ನಮ್ನ ನೋಡಿ ಕಳ್ತಕಲ್ರಿ ನಂದೇವ್ರೇ ಬೇರೆ. ನಾವ್ ಲಂಡನ್ನನಾಗೆ ಹೇಗೆ ಇರ್ತೀವೋ, ಇಲ್ಲೂ ಹಂಗೇನಾ, ನೈಟ್ಕ್ಲಬ್ ಅಂದ್ರ ಅಲ್ಲೂ, ಇಲ್ಲೂ ನಮಗೆ ಒಂದೇ. ಅವರು: ಸರಿಯಪ್ಪ, ನಿಮ್ಮಾತೇ ನಡೆಯೋದಿದ್ರೆ ನಾವು ಹಾಂಗ ಮಾಡಾವ, ತಕಳ್ರಿ, ರೀ , ಆದ್ರ ನಂಗಳಿಗೆ ಯೋಗ್ಯತೆನೆ ಇಲ್ಲ ಅಂತೇಳಿ ಜ್ಞಾನ ಪೀಠ, ಅಂಥದೆಲ್ಲ ನೀವೇ ಸುರ್ಕಂತಿರಿ ನಿಮ್ಮಾತೇ ನಡೆದ್ಯಂತ ಎಲ್ಲೆಲ್ಲೂ? ಇದು ಸರಿಯಾ? ಬೇರೆಯವರಿಗೆ ಯೋಗ್ಯತೆನೆ ಇಲ್ಲಾ೦ತ ನೀವ್ನಿವೇ ಹಂಚ್ಕಳ್ಳಾದ್ ಸರಿಯಾ ಸ್ವಾಮಿ? ಇನ್ನೊಬ್ಬರು:ರೀ ಸ್ವಾಮಿ, ಈ ಅವಾರ್ಡುಗಳು ಕಳ್ಳೇಕಾಯಿ ಹಂಚಿದಾಗೆ ಅನಕಂಡ್ರ, ಅದಕ್ಕೂ ಸ್ಟಾ೦ಡರ್ಡ್ಗಳದಾವೆ, ಯೋಗ್ಯತೆ ಅಳೆದೂ ಸುರಿದು ನಂತರಾನೇ ಅವಾರ್ಡುಗಳ ಹಂಚೋದ. ಇವರು: ಅದೇನಪಾ ಸ್ವಲ್ಪ ಹೇಳ್ರಪಾ ಬಿಡಿಸಿ. ಇನ್ನೊಬ್ಬರು: ನಾ ಯೋಳ್ತೀನೀ, ಕೇಳ್ರಿ, ಸತ್ಯ ಅಂದ್ರ ಬೆಲೆ ಕೊಡ್ಬೇಕಾ, ಸತ್ಯವೇ ನಿತ್ಯ, ಆಲ್ಲವ್ರ? ಆ ಕಾಲ್ದಾಗೆ ಅಧಿಕಾರದಲ್ಲಿರೋವರಿಗೆ ಸಪೋರ್ಟ್ ಮಾಡೋ ಸಾಹಿತಿಗೋಳ, ಪತ್ರಿಕೋದ್ಯೋಗಿಗಳ ರಾಜಕಾರಣಿಗಳದೇ ಒಂದು ಪಕ್ಷ ಅಂತರ್ಗತವಾಗಿತ್ತ೦ತ್ಪುಕಾರು, ಇದೆಯೇನೋ ಈಗ್ಲೂ. ಯಾರಿಗೆ ಗೊತ್ತು?, ಇವ್ರ ಮಾತೆಂದ್ರೆ ಅಧಿಕಾರದಲ್ಲಿರೋವರ್ಗೆ ಜೇನ್ತುಪ್ಪ ಇದ್ದಂಗೆ ಬಾಯ್ತುಂಬ, ಇವ್ರಿಗೂ ಊರೆಲ್ಲ ಏನೆಲ್ಲಾ ಸೌಕರ್ಯ, ವಿದೇಶಿ ಟೂರ್ಗಳು, ಹೀಗೆ ಕೊಟ್ಟು ಬೇಕಾದಾಗ ಔಟ್ಸೈಡ್ ಸಪೋರ್ಟ್ ಹೀಗೆಲ್ಲ ಮಾಡ್ಕಳ್ಳದಲ್ದೆ ನಮ್ಮ ಸಂಸ್ಕಾರ, ನಮ್ ಧರ್ಮ ಅಂದ್ರ ಕ್ಯಾರೇ ಅಂದೆ ಇರೋವ್ರದೇ ಗುಂಪು ಮಾಡಕಂಡಾಗೆ ಅಂಬೋದೇನೋ. ಅವರು: ನೀವು ಹಿಂಗೆಲ್ಲ ಹೇಳ್ಕಮ್ಬಂದ್ರೆ ಅದೇ ಒಂದು ರಾಜಕೀಯ ಆಗೋಗ್ತಾವೆ, ನಮಗೆ ಅವೆಲ್ಲಾ ಬ್ಯಾಡಾ, ನಾವುಗೊಳು ಏನೋ ಭಗವಂತ ಕೊಟ್ಟಂಗ್ ಅದೀವಿ. ರಾಜಕೀಯದ ಸಂಗ ಬೇಡವೇಬೇಡ. ಯಾರ ಮುಲಾಜು ಬ್ಯಾಡ. ಇವರು: ತಗಳಪ್ಪಾ, ಇಷ್ಟೊತ್ತು ಮಾತಾಡಿ ಈಗ ಈ ವೇದಾಂತಕ್ಕೆ ಇಳಿದವ್ರೇ, ಇದಕ್ಕೇನೆವೆಯಾ ಹೇಳೋದು ‘ದ್ರಾಕ್ಷಿ ಕೈಗೆ ಎಟಕಿದ್ರೆ ಅದು ನಂದೇ ಸಾಹಸ, ಇಲ್ದಿದ್ರೆ ಈ ದ್ರಾಕ್ಷಿ ಹುಳಿ, ಯಾರ್ಗೆಬೇಕು?’ ಅಂತಾ ಅಲ್ಲವ್ರಾ? ಸ್ವಾಮಿಗಳೇ ನಾನು: ಸಾಕು ಬಿಡಿ, ನಾವೇನಿದ್ರು ಒಣ ಚರ್ಚೆನಲ್ಲೇ ಇರ್ತೀವೋ ಹೊರತು, ಏನನ್ನು ಸಾಧಿಸಲ್ಲ, ಸಾಧನೆ ಮಾಡಿರ್ವ್ರನ ನೋಡಾದ್ರೂ ಕಲಿಯಲ್ಲ. ಈಗ ಎಲ್ಲ ಹೇಳಿ ಸತ್ಯವೇ ….. ಎಲ್ಲಾ ಒಟ್ಟಿಗೇ ಒಂದೇ ಉಸ್ರನಲ್ಲಿ : ಈಗಿನ ದಿನಗಳಲ್ಲಿ ಸತ್ಯವೇ ಪಥ್ಯ, ನಿತ್ಯವೂ ಅದೆ ಪಥ್ಯ. ಇದನ್ನ ತಿಳಿದವರೇ ನಿತ್ಯ ಸತ್ಯಕ್ಕೆ ಬೆಲೆ ಕೊಡೋವ್ರು. ಇಲ್ದಿದ್ರೆ ನೀವ್ ಹೇಳಿದ್ ಎಲ್ಲಾ ದೇವರಿಗೂ ಅಪಥ್ಯ.




Comments