ನೂತನ ಸಂವತ್ಸರ ಫಲಂ, ನಿಮಗೆಲ್ಲ ಭವಿಷ್ಯ ವಲಂ!
- haparna
- Dec 22, 2016
- 3 min read
ನೂತನ ಸಂವತ್ಸರ ಫಲಂ, ನಿಮಗೆಲ್ಲ ಭವಿಷ್ಯ ವಲಂ!
ಸೂಚನೆ:: ಈ ಭವಿಷ್ಯ ಓದುವುದಕ್ಕೆ ಮುಂಚೆ ಈ ಚತುಷ್ಪಾದ ಪದ್ಯ ಓದಿ, ಆಗಲೂ ಇಷ್ಟವಾದರೆ ನಂತರ ಮುಂದುವರೆಯಿರಿ:- ನಂಬಿದರೆ ನಂಬಿ,ಇಲವಾದರೆ ಬರೀ ಬುರುಡೆ ಎನ್ನಿ, ಹಾಯದಿರಿ ಸುಳ್ಳಾದರೆ, ಮರೆತು ನಕ್ಕುಬಿಡಿ ನಿಜವಾದರೆ, ನಂಬದಿದ್ದರೆ ನಷ್ಟವ ಹೊಂದಿ ಕರಟ ಹಿಡಿಯುವುದೇನಿಲ್ಲ, ನಂಬಿ ನಂಬಿ ಮೋಸ ಹೋಗುವದಕೇನ ಬ್ಲಾಕ್ಮನಿಯಲ್ಲ. ……(1). ಹಣೆಯಲೊಂದ ದೊಡ್ಡ ನಾಮ ಯಾ ವಿಭೂತಿ ಪಟ್ಟೆಯ ಹಚ್ಚಿ, ಮಿರಮಿರ ಹೊಳೆಯುವ ಕಚ್ಚೆ ಪಂಚೆಯ,ಹೆಗಲಿಗೊಂದ ಶಾಲು, ಹಸ್ತೋದಕ ಕೊಡುವ ಕೈಬೆರಳುಗಳ ತುಂಬ ಚಿನ್ನ, ವಜ್ರದ ಉಂಗುರುಗಳ ವೈಭೋಗದ, ಅಟ್ಟಹಾಸದ ಮೆರವಣಿಗೆ. …….(2). ಎಮಗಿಲ್ಲ ಈ ಪರಿ ಟೀವೀ ಜನರ ಠೀವಿ, ಸೊಗಸು,ಮೋಡಿ, ಆವರಾಡಿದ್ದೇ ಮಾತು,ನುಡಿ,ಸುಳ್ಳೋ ನಿಜವೋ,ಆ ಚಿ೦ತೆ ಅವರಿಗಿಲ್ಲ, ನಿಮಗೂ ಅಷ್ಟೇ ಯಾತರದು ವರಿಯೂ ಬೇಕಿಲ್ಲ, ನಮ್ಮ ನುಡಿ ಕೇಳಿ ತೆಪ್ಪಗಿರಿ, ಹಾಗೆ ಮರೆತು ನಕ್ಕುಬಿಡಿ. …… (3). ಈಗ ಓದಿ— ಮೇಷ ಲಗ್ನದವರಾದರೆ : ಜನವರಿಯಿಂದ ನಿಮಗೆ ಶನಿಯ ಕಾಟವಿಲ್ಲ, ಆಬ್ಸಲ್ಯೂಟ್ಲಿ ನೋ ವರೀ ಅಟಾಲ್, ಕ್ಲಬ್ಬಿನಿಂದ ರಾತ್ರಿ ಲೇಟಾಗಿ ಬಂದ್ರು ಹೆಂಡತಿಯ ಮಾತಿಗೆ ಹೆದರಬೇಕಿಲ್ಲ. ಗುರು ಷಷ್ಠ್ಯದಲ್ಲಿದ್ದು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರು ಹೆದರಬೇಡಿ, ಅಸಿಡಿಟಿಗೆ ಮಾತ್ರೆ ಪಕ್ಕದಲ್ಲೇ ಇದ್ದರೆ ಸರಿ. ನಿಮ್ಮ ಬಾಸ್ ರಸಿಕನಾಗಿದ್ದು ನಿಮಗೆ ಅವರಿಂದ ತೊಂದರೆ ಕಾಣಬರುತ್ತಿಲ್ಲ, ಮುನ್ನುಗ್ಗಿ. ವೃಷಭ ಲಗ್ನದವರಾದರೆ:ಅಷ್ಠಮ ಶನಿ ಆಗಾಗ್ಗೆ ಕಾಡುತೈತಿ, ಸಂಸಾರದಲ್ಲಿ ಡೆಲಿಕೇಟಾಗಿ ಎಲ್ಲರಲ್ಲೂ ವರ್ತಿಸಿ, ಹೆಂಡತಿ ಯಾ ಪತಿಯನ್ನು ಅನಾವಶ್ಯಕ ಎದುರು ಹಾಕಿಕೊಂಡು ಹ್ಯಾಪಿ ಮೋರೆ ಹಾಕಿಕೊಳ್ಳುವ ಬದಲು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಟೈಟ್ ಮಾಡಿ, ವೃಥಾ ಯಾರಿಗೂ ಹಣ ಖರ್ಚು ಮಾಡಿ ಮೈ ಪರಚಿಕೊಳ್ಳುವಂತೇ ಮಾಡದೆ ಜಾಣತನವಿರಲಿ, ಹೇಗಿದ್ದರೂ ಗುರು ನಿಮ್ಮ ಆಪತ್ಬಾಂಧವ, ನಿಮ್ಮ ತಂದೆ ಯಾ ಮಾವನ ಹತ್ತಿರ ನಯವಾಗಿ ವರ್ತಿಸಿಕೊಳ್ಳಿ, ಲಾಭವಿದೆ. ನೀವು ಮಿಥುನ ಲಗ್ನದವರಾದರೇ: ಇಂದು ನಿಮ್ಮ ಬುದ್ಧಿಶಕ್ತಿಗೆ(ಇರಲಿ, ಬಿಡಲಿ-ಅದು ಬೇರೆ) ಬೆಲೆಕೊಡುವ ಹಿರಿಯ ಅಧಿಕಾರಿಗಳಿದ್ದಾರೆ, ಅಂಥವರುಗಳಿಗೆ ಸ್ವಲ್ಪ ಹೆಚ್ಚಿಗೇನೇ ಬೆಣ್ಣೆ ಹಚ್ಚುವದರಿಂದ ಉಪಯೋಗವಿದೆ, ಸಮಯ ನೋಡಿ ಮೋಡಿ ಮಾಡಿ(ಇಲ್ಲಿ, ‘ಮೋಡಿ’ ಯ ಜಾಗದಲ್ಲಿ ‘ಮೋದಿ’ ಎಂಬ ಪ್ರಯೋಗ ಸರಿಯಾದರೂ ನಾವು ಹಾಗೆ ಹೇಳುತ್ತಿಲ್ಲ). ಉದ್ಯೋಗದಲ್ಲಿ ಪ್ರತಿಷ್ಠೆ, ಲಾಭ, ಪ್ರಮೋಷನ್ಗೆ ಅವಕಾಶ ಉಂಟು. ಫಲಿತಾಂಶ ನೀಡುವಾಗ ಶನಿಯು ನಿಧಾನ ಮಾಡಿದರೂ, ಭಾಗ್ಯಕ್ಕೆ ಇಂಬು ಕೊಡುವುದಿದೆ. ರೇಸ್ ಕೋರ್ಸಿಗೂ ಮುನ್ನುಗ್ಗಿ. ಅಳಿಯಂದಿರ ಬಳಿ ಸುತರಾಂ ಚರ್ಚೆ ಬೇಡ. ನೀವು ಕಟಕ ಲಗ್ನದವರಾದರೆ: ಗುರುವು ತನ್ನದೇ ಸ್ವಂತವಾದ ಭಾಗ್ಯಸ್ಥಾನಕ್ಕೆ ದೃಷ್ಟಿ ನೇರ ಬಿರುವದರಿಂದ ನಿಮಗೆ ಅತಿಶಯವಾದ ಗೌರವ, ಸನ್ಮಾನ,ಲಭ್ಯವಿದೆ. ಎರಡೂ ಕೈಗಳಿಂದ ಬಾಚಿ ಕೊಳ್ಳಿ.ಆದರೆ ತಿನ್ನುವುದರಲ್ಲಿ ಹಿತ ಮಿತವಿರಲಿ, ಅಜೀರ್ಣ ರೋಗಕ್ಕೆ ಅವಕಾಶವಿದೆ, ಹಾಲು ನಿಮ್ಮ ಮಿತ್ರ, ಆಲ್ಕೋಹಾಲು ಅಲ್ಲ, ಅರ್ಥವಾಯಿತಲ್ಲಾ? ಅನಾವಶ್ಯಕ ತೊಂದರೆಗಳನ್ನು ಹೆಗಲಿಗೆ ಹಾಕಿಕೊಳ್ಳುವುದುಂಟು.ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳುವುದು ನಿಮ್ಮ ಪ್ರಾತಃಸ್ಮ ಕಾರ್ಯವಾಗಲಿದೆ. ಮೊದಲೇ ಹೇಳಲಿಲ್ಲ ಎನ್ನಬೇಡಿ. ನೀವು ಸಿಂಹ ಲಗ್ನದವರಾದರೆ: ಕುಟುಂಬ ಸ್ಥಾನದ ಗುರು.ತ್ರಿಕೋನದಲ್ಲಿ ಶನಿ ಹೆಚ್ಛೇನು ತೊಂದರೆ ಕಾಣಿಸುತ್ತಿಲ್ಲ, ಆಗಾಗ್ಗೆ ಲಾಭವು ಉಂಟು. ಆದರೂ ಹುಷಾರು, ಸಪ್ತಮಾಧಿಪತಿ ಶನಿಯೇ ಮರೆಯಬೇಡಿ, ಹೆಂಡತಿಯ ನಾಲಿಗೆಗೆ ಹೆದರಬೇಕಾಗುತ್ತದೆ. ಅಂಥ ವೇಳೆ ಜಾಗ ಖಾಲಿ ಮಾಡಿ, ಮಾತಿಗೆ ನಿಂತರೆ, ನಿಮ್ಮ ಗ್ರಹಚಾರ ನಿಮಗೆ ಕೈಕೊಡುವುದಿದೆ. ಭಾವಮೈದುನರನ್ನು ದೂರವಿಟ್ಟಷ್ಟೂ…. ಯು ಕ್ಯಾನ್ ಫಿಲ್ ಅಪ್ ಬ್ಲಾ೦ಕ್ಸ್. ನೀವು ಕನ್ಯಾ ಲಗ್ನದವರಾದರೆನೀವು: ನಿಮ್ಮ ದಶಾ ಭುಕ್ತಿ ಹೇಗಾದರೂ ಸರಿ, “ಗುರುವಿನ ಗುಲಾಮನಾಗುವ ತನಕ….” ಗೊತ್ತಲ್ಲ್ಲಾದಾಸರ ಮಾತು? ಈಗ ಗುರು ನಿಮ್ಮ ಕೈ ಹಿಡಿದಿದ್ದಾನೆ, ಗಟ್ಟಿಯಾಗಿ. ಸಗಣಿ ಹಿಡಿದ ಕೈ ಆದರೂ ಬಂಗಾರವಾಗಬಲ್ಲದು. ಬಾಚಿಕೊಳ್ಳಿ, ಆದರೆ ಮರೆಯದಿರಿ –ಬಾಚಿಕೊಂಡದ್ದರಲ್ಲಿ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಹೆಂಡತಿಗೇ ಮುಕ್ಕಾಲು ಪ್ಲಸ್ ಮೂರೂ ಪಾಲು ಹೋಗಿ ಸೇರಿಬಿಟ್ಟಿರುತ್ತೆ! ಇನ್ನು ಮಿಕ್ಕಿದ್ದರೆ ನಮ್ಮ ಕ್ಲಬ್ ತನಕ ಬರಲಿ. ನೀವು ತುಲಾ ಲಗ್ನದವರಾದರೆ: ಹನ್ನೆರಡರಲ್ಲಿ ಗುರು, ನಿಮ್ಮ ಸ್ವಾಭಿಮಾನ, ಪ್ರತಿಷ್ಠೆಗೆ ಧಕ್ಕೆ ಉಂಟು. ನಮ್ಮ ಮಾತು ನಂಬಿ, ಹೆಣ್ಣು ಕೊಟ್ಟ ಮಾವನ ಬಳಿ ಮಾತಿಗೆ ನಿಲ್ಲಬೇಡಿ, ವಿದ್ಯಾರ್ಥಿಗಳಾದರೆ ಪ್ರೊಫೆಸರಗಳ ಬಳಿ ಸಿಕ್ಕಿ ಹಾಕಿಕೊಳ್ಳುವ ಸಂಧರ್ಭಗಳು ಹೇರಳವಾಗಿವೆ. ಶನಿ ತಕ್ಕ ಮಟ್ಟಿಗೆ ಅವನ ಹಿಡಿತದಿಂದ ಬಿಟ್ಟು ಬೇರೆಡೆ ಗಮನ ಬೀರುವುದರಿಂದ ಅಲ್ಲಿಯ ತನಕ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಉಂಟು. ಮಕ್ಕಳಲ್ಲಿ ರಾಜಿ ಸೂತ್ರಗಳು ಫಲಿಸಲಿವೆ. ನಿಮ್ಮ ಸಂಗಡಿಗ, ಹೆಂಡತಿ, ಬಾಸುಗಳು ನಿಮ್ಮ ಬಗ್ಗೆ ಮರುಕ ತೋರುವುದಿದೆ. ಆ ಕ್ಷಣಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ನಿಮ್ಮ ಇಷ್ಟಾರ್ಥ ಸಿದ್ಧಿಸುವ ಸಂಭವವುಎಂಟು. ನೀವು ವೃಶ್ಚಿಕ ಲಗ್ನದವರಾದರೆ:: ನಿಮ್ಮ ಸ್ವಭಾವವೇ ಇನ್ನೊಬ್ಬರನ್ನು ಚೇಳು ಕುಟುಕಿದಂತೆ ಮಾಡುವದಿದ್ದು, ಈ ಎರಡು ವರ್ಷ,ಮತ್ತಾರು ಮಾಸ ಆ೦ಥಹ ಕೆಲಸಕ್ಕೆ ಕೈ ಹಾಕದಿರಿ. ಶನಿ ನಿಮಗೆ ಅಷ್ಟಮ ಫಲ ಕಾರಕ, ಮರೆಯದಿರಿ. ಇದುವರೆಗೆ ಅಂದರೆ ನಿನ್ನೆ ಮೊನ್ನೆಯವರೆಗೆ ನೀವು ಆಡಿದ೦ತೆ ನಡೆಯುವದಿತ್ತು, ಇನ್ನ ಮುಂದೆ ಯೋಚಿಸಿ, ಸೂಕ್ಷ್ಮವಾಗಿ ವರ್ತಿಸಿ. ಸದ್ಯಕ್ಕೆ ಗುರು ಲಾಭಕಾರಕನಾಗಿದ್ದು ಆಗಸ್ಟ್ ನಂತರ ಅವನೂ ನಿಮ್ಮನ್ನು ಕಂಡರೆ ಸೆಟೆದುಕೊಳ್ಳುವದಿದ್ದು ಖರ್ಚು, ವೆಚ್ಚಗಳ ಬಗ್ಗೆ ಯೋಚಿಸಿ, ತೂಗಿ ನೋಡಿ ಮುಂದುವರೆಯಿರಿ. ಸಂಸಾರ ಗುಟ್ಟು, ವ್ಯಾಧಿ ರಟ್ಟು ಅನ್ನುವ ಹಾಗೆ ನಡೆದರೆ ಕ್ಷೇಮ. ನೀವು ಧನುರ್ ಲಗ್ನದವರಾದರೆ : ಕರ್ಮಸ್ಥಾನ ಸ್ಥಿತ ಹಾಗು ಲಗ್ನಾಧಿಪತಿ ಗುರು ನಿಮ್ಮ ಉದ್ಯೋಗದಲ್ಲಿ ಆಗಸ್ಟ್ ಮಾಸದವರೆಗೂ ಏನೆಲ್ಲಾ ಅನುಕೂಲ, ಬಡತಿ ಕೊಡುವ ಸಾಧ್ಯತೆ ನಿಚ್ಚಳವಾಗಿ ನಮ್ಮ ಸ್ಪಷಲ್ ದುರ್ಬೀನು ಮೂಲಕ ಕಾಣುತ್ತಿದೆ. ಆದರೆ ಮರೆಯದಿರಿ, ಛಾಯಾಪುತ್ರನು ಲಗ್ನದಲ್ಲೇ ಇದ್ದು ಅದೇ ಸಪ್ತಮ ಹಾಗು ಹತ್ತರ ಮೇಲೆ ಕಣ್ಣು ಹಾಯಿಸಿ, ಆಗಾಗ್ಗೆ ದುರ್ಬಿನನಲ್ಲಿ ಅಡ್ಡಡ್ಡ ಬಂದು ನಿಧಾನ ಮಾಡುವದು ಕಾಣಬರುತ್ತಿದೆ. ಸಾಕಷ್ಟು ಎಳ್ಳೆಣ್ಣೆ, ಬತ್ತಿ ದೀಪ ಹಚ್ಚಿ, ಸಿಕ್ಕಸಿಕ್ಕವರಿಗೆಲ್ಲ ಡೊಗ್ಗು ಸಲಾಮು ಹಾಕುವ ಬದಲು ಶನಿ ದೇವರಿಗೆ(ನೀವು ನಾಸ್ತಿಕರಾದರೆ ಈ ಭವಿಷ್ಯ ಓದಬೇಕಿಲ್ಲ) ಹಾಕಿ ಸುಧಾರಿಸಿಕೊಳ್ಳಿ. ಮಿಕ್ಕ ವಿಚಾರಕ್ಕೆ ನಮ್ಮನ್ನು ಬಂದು ಕಾಣಿ-ನಾವು ನಿಮಗೆ ಬಾ ಎಂದು ಹೇಳಿದಾಗಲಷ್ಟೇ. ನೀವು ಮಕರ ಲಗ್ನದವರಾದರೆ: ನಿಮ್ಮ ಲಗ್ನಾಧಿಪತಿ ಸೂರ್ಯಪುತ್ರ ವ್ಯವಸ್ಥಾನದಲ್ಲಿದ್ದು ನಿಮ್ಮ ಇಡೀ ಜೀವನವೆ ತಪ್ಪು ನಂಬರಿನ ರೇಸ್ಕುದುರೆಯ ಬಾಲಕ್ಕೆ ಕಟ್ಟಿದ ಹಣದಂತೆ ನಷ್ಟವಾದಂತೆ ಅನಿಸಿದರೂ ಗುರು ನಿಮ್ಮಆಪತ್ಕಾಲಕ್ಕೆ ಮಕ್ಕಳ ಮೂಲಕ ಸಾಕಷ್ಟು ರಿಪೇರಿ ಮಾಡುವನು. ತಂದೆಯಂತಹವರ ಸಹಾಯವು ನಿಚ್ಚಳವಾಗಿದೆ. ಹಾಗೆಂದು ಸುಮ್ಮನಿರದಿರಿ. ‘ಗೋವಿಂದನ ದಯೆಯಿರಲಿ’ ಎಂದು ನಿತ್ಯ ಭಜನೆ ಮಾಡಿ. ನೀವು ಕುಂಭ ಲಗ್ನದವರಾದರೆ:: ನೀವು ಬಹು ವಿವೇಕಸ್ಥರೆಂದು ಅನೇಕ ಜರತಾರಿ ಗುರುಗಳು ಹೇಳುವುದಿದೆ. ಆದರೆ ನಾವು ಯಾವುದನ್ನು ‘ಪ್ರತ್ಯಕ್ಷ ನೋಡು, ನಂತರ ಪ್ರಮಾಣಿಸಿ ಮಾತಾಡು’ ಅನ್ನೋ ತತ್ವದವರು. ಕುಂಡಲಿಯಲ್ಲಿ ಏನು ಹೇಳುತ್ತದೆ? ನಿಮ್ಮ ಲಗ್ನಾಧಿಪತಿ ಶನಿಯು ನಿಮ್ಮ ಕರ್ಮಸ್ಥಾನದಿಂದ ನೋಡುತ್ತಾ ಒಳ್ಳೆಯದನ್ನೇ ಮಾಡ ಬಯಸುತ್ತಾನೆ.,ಗುರು ದೃಷ್ಟಿ ವಕ್ರವಾಗಿದ್ದರು ಯೋಚನೆ ಬೇಡ. ಮಾವನನ್ನು ವಿಚಾರಿಸಿಕೊಂಡು ಅವರ ಹಿತೋಪದೇಶಕ್ಕೆ-ಅರ್ಥಾತ್ ನಿಮ್ಮ ಪಾರ್ಟ್ನರ್ನ ಮಾತಿಗೆ ಬೆಲೆ ಕೊಟ್ಟು ದಾರಿ ನೋಡಿಕೊಳ್ಳಿ.ಮೇ ಗಾಡ್ ಬ್ಲೆಸ್ ಯು. ಏನಾದರೂ ಟಿವೀಗಳಲ್ಲಿ ಕಾಣಿಸಿಕೊಳ್ಳುವ ಸಂಖ್ಯಾ ಶಾಸ್ತ್ರ ಪ್ರವೀಣರು ಗಳಿಂದ ಮೈಲಿಯಷ್ಟು ಅಂತರ ಕಾಯ್ದುಕೊಳ್ಳಿ. ನೀವು ಮೀ ನ ಲಗ್ನದವರಾದರೆ::. ನಿಮಗೆ ಯಾರ ಬೆಂಬಲ ಬೇಡವೇ ಬೇಡ ನಿರಂತರ ಗುರು ಸಂಬಂಧ ಇರಿಸಿಕೊಂಡು ನೀವು ಆಡಿದ್ದೇ ಆಟ ಅನ್ನುವ ತರಹ ಆಗಸ್ಟ್ ವರೆಗೆ ನಡೆಯುವದಿದೆ. ಆದ್ದರಿಂದ ಹಿಗ್ಗಿ, ಬೀಗಿ ಎಲ್ಲರನ್ನು ಎದುರು ಹಾಕಿಕೊಳ್ಳುವ ಕೆಲಸಕ್ಕೆ ಕೈ ಹಾಕದಿರಿ. ಕಾರಣ ಶನಿ ನಿಮಗೆ ತಗ್ಗಿಸಲು ಮಾಡುತ್ತಿರುವದನ್ನ ನಮ್ಮ ವಿಚಿತ್ರ ದುರ್ಬೀನನಲ್ಲಿ ರಂಗುರಂಗಾಗಿ ಕಾಣುತ್ತಿದೆ. ನಮ್ಮ ಈ ಮಾತಿನಲ್ಲಿ ಅನುಮಾನವಿದ್ದರೆ ಜರತಾರಿ ಪಂಚೆ, ಶಾಲುಧಾರಿಗಳನ್ನು ವಿಚಾರಿಸಿ, ಮತ್ತೆ ನಮ್ಮ ಬಳಿ ಕಾಲು ಇಡಬೇಡಿ. ಒಟ್ಟಿನಲ್ಲಿ, ಹೆಂಡತಿ ಈ ವರುಷ ನಿಮಗೆ ——————————-
Comments