ಇವರು, ಯಾರು, ನೀ ಹೇಳಬಲ್ಲೆಯೇನೋ
- haparna
- Sep 12, 2016
- 2 min read
ಇವರು, ಯಾರು, ನೀ ಹೇಳಬಲ್ಲೆಯೇನೋ? ——————————————————————————————- (ಲೇಖಕ : ಎಚ್. ಆರ್. ಹನುಮಂತ ರಾವ್ ) ———————————————————- ಇ… ವ…ರು, ಯಾ ರು, ನೀ ಹೇಳಬಲ್ಲೆಯೇನೋ, ಇವರು ಯಾರು ಏನು, ಎತ್ತ, ಹೇಗೆ, ತಿಳಿಯಬಲ್ಲೆಯೇನೋ ಇವರದ್ಯಾವ ನಡೆ, ಇವರದೆ೦ಥ ನುಡಿ, ಹೇಳಬಲ್ಲೆಯೇನೋ, ಅವರ ನೋಡಿ, ಅವರ ಬಣ್ಣ, ಅವರ ಗುಣ ಏನೋ, ಎಂತೋ. ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI. 1)
ಹಲವರಿಗುಂಟು ಬಿಳಿಯ ಗಡ್ಡ, ಮೀಸೆ, ತಲೆಯ ನೆರೆತ ಕೂದಲು, ಸೊಂಟದಲ್ಲೊಂದು ಜೋಳಿಗೆ, ಕೈಯಲೊ೦ದು ಡಯರಿ ಹಿಡಿದು ತಿನ್ನವಾಗಲಂತೂ ಯಾವ ಬೇಧವೆಣಿಸದಂಥ ಮಹಾ ಗುಣವಂತರು ಕುರಿ, ಕೋಳಿ, ಮತ್ಸ್ಯ, ದನದ ಮಾಂಸವೆಲ್ಲ ಒಂದೇ ಎನ್ವರಿವರು. ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI. 2)
ಇವರ ಓದು, ಬರಹ ಎಲ್ಲ -ಡಾಕ್ಟರೇಟ, ಸ್ಕಾಲರ್ಗಳನೆಲ್ಲ ಮೀರಿ ಅಲ್ಲಿಂಗ್ಲಿ೦ಡ್ಯೂರೋಪಮೇರಿಕ, ಇಲ್ಲಿಂಡ್ಯಾದೊಳಗೂ ಇಲ್ಲ ಯಾರೂ, ಇವರ ಘನತೆ, ಇವರ ತೂಕ, ಇವರ ವಿದ್ವತ್ಗೆಲ್ಲ ಯಾರೇ ಇಂಡಿಯನ್ಸೂ ಸಮಾನರಲ್ಲ, ಎಂದೇ ಮೀಸೆ ತಿರುವ, ಈ ಅತಿಬುದ್ಧಿವಂತರೋ ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI 3)
ಇವರು ಅಸಾಮಾನ್ಯರೋ, ಅಸಾಧಾರಣ ಬುದ್ಧಿಮತ್ತೆ, ಜ್ಞಾನಜೀವ್ಗಳೋ ಇವ್ರ ಬುದ್ಧಿಮತ್ತೆ ಎಲ್ಲಾ ಸ್ವಂತ, ಸ್ವಾಯತ್ತತೆ, ಯಾವ ದೇವರಿವರ ಲೆಕ್ಕಗಿಲ್ಲ ಇವರಿಗಿವರೆ ಬ್ರಹ್ಮ,ಲಕ್ಷ್ಮಿ,ಸರಸ್ವತೀ, ವಿಷ್ಣು, ವಿಘ್ನೇಶ್ವರರೆಲ್ಲ ಅಕೌಂಟ್ಗೇ ಇಲ್ಲ ರಾಮ,ಕೃಷ್ಣ, ರಾಮಾಯಣ, ಭಗವದ್ಗೀತೆ, ಮಹಾ ಭಾರತ ಎಲ್ಲ ಶಂಖ್ಪುರ್ರಾಣ ಹೇಳಬಲ್ಲೆಯೇನೋ, ನೀ ತಳಿಯಬಲ್ಲೆಯೇನೋ …… Iಪಲ್ಲವಿI. 4)
ಅವರೆನ್ವರು–ಹಾ, ಒಂದ ಮಾತು, ಭಗವದ್ಗೀತೆ? ಇದು ಯಾರ ಬರಹ, ಏನ ಬುದ್ಧಿಮತ್ತೆ? ಯಾರ ಕೈಯ ಚಳಕ?,ಬುದ್ಧಿಗೆಲ್ಲಿ ಕೆಲಸ ಇಲ್ಲಿ, ಬರೀ ರಗಳೆ, ಸ್ವಾರ್ಥ, ಮತ್ಸರ, ಇಂಡ್ಯರಿಗೆಲ್ಲಾ, ಮಂಕುಬೂದಿ ಹರಡಿ, ಜನರಿಗೆಲ್ಲ ಬೇಡವಾದ ತಿರುಳು ಹಂಚಿ ಮೋಸಗೈದರೋ, ನಿವ್ಮೋಸ ಹೋದಿರೋ, ನೀವ್ಗಳೆಲ್ಲಾ ‘ಮಂಕುದಿಣ್ಣೆ’ ಹೌದೆನ್ನಿರೋ-ಹಾ…. ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI 5)
ತಿಳಿಯತೇನೋ ಈಗ ಇವರ ಬುದ್ಧಿಮತ್ತೆ, ಜ್ಞಾನಶಕ್ತಿ, ವಿದ್ವತ್ತಿಗೆ ಮೆಚ್ಚಿ ಇವರ ದೇಶ ಇವರದೇ ಗೌರ್ನಮೆಂಟು ಬಾರಿ ಬಾರಿಗೂ ಅವಾರ್ಡು, ಕಲಶ, ಜ್ಞಾನಸೀಟಿನ ಮೆಹ್ನೆತ್ತು, ದೇಶಪ್ರೇಮ ಸಂಕೇತದಾ ಕಿರೀಟ ತಲೆಗೆ ಇಟ್ಟು, ಪುಕಟ್ಟು ಕೊಟ್ಟರಲ್ಲ ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI 6)
ಆದರೇನು, ಇವರೆಲ್ಲ ಮಹಾ ಮಹಂತರು, ಬಲು ಗಟ್ಟಿ ಇವರ ಮಾತೇ , ಇವರ ನುಡಿ, ಅವರ ನಡೆ, ಇವರ ತಾಳ, ಅವರ ರಾಗ, ಇವರ ತತ್ವ, ಆವರ ವಚನ, ಇವರ ಮಾತು ಪಬ್ಲಿಕ್ಕೂ, ಸರ್ಕಾರದ ನಡೆಯುದ್ದಗಲಕೂ ಗೊತ್ತಾಯಿತಲ್ಲವೊ? ಹೌದಲ್ಲವೋ? ಇವರು ಯಾರು, ಏನ ತಿಳಿಯಲಿಲ್ಲವೋ? ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI 7) , ಇಂದಿರಮ್ಮ ಅಂದು ಮಾಡಿದಲೆಮ್ಮ ಸ್ವಾತಂತ್ರ್ಯ ಹರಣ, ಕ್ರೌರ್ಯ, ಹಿಂಸೆ, ಜೈಲು ವಾಸ ನೋಡಿಯೂ ನೊಂದ ಜೀವ್ಗಳ ಸಾಂತ್ವನಕಿಲ್ಲವೋ ಈ ರಸಿಕರು, ಕಾವೇರಿ, ಕಾವೇರೀ ಅಂತ ಎಲ್ರು ಹಾ ಹಾ, ಒಹೋ ಒಹೋ ಅಂತಿದ್ರು, ಕ್ಯಾರೇ ಅನ್ನದವ್ರು, ಬಾಯೇ ಬಿಡದೇ ಗಪ್ಚುಪ್ಪು, ಇವ್ರು ಬಲೇ ಬುದ್ಧಿಮತ್ತರು ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI 8)
ದೇಶಕೆಲ್ಲ ನಾವೇ ಪ್ರಚಂಡರೋ, ನಮ್ಮ ಮೀರಿ ಯಾರು ಯೋಗ್ಯರಿಲ್ಲವೋ ಸಾರ್ಸಿ ಗುಡ್ಸಿ, ಏನೇ ಮಾಡಿ ಉದ್ದಗಲಕೂ, ಬುದ್ಧಿಮತ್ತೆ ನಮ್ಮ ಬಿಟ್ಟರಿಲ್ಲವೋ, ಅದಕೆ ಜ್ಞಾನ ಸೀಟು ನಮಗೆ ಮಾತ್ರ ಲಭ್ಯ, ತಿಳಿಯಲೋ ನಮ್ಮ ಮಾತೆ ಫೈನಲೋ ಅರಿತಿಯೇನೋ ಈಗಲಾದರೂ, ಹೌದಾದರೇನು, ಇಲವಾದರೇನು, ನಮಗೇನು? ಹೇಳಬಲ್ಲೆಯೇನೋ, ನೀ ತಿಳಿಯಬಲ್ಲೆಯೇನೋ …… Iಪಲ್ಲವಿI 9) —— ವಿ.ಸೂ.: ವಾಚಕರು ಇದರ ಅರ್ಥ ಗೊತ್ತಾಗಲಿಲ್ಲವೆಂದರೆ ನಾವು ಏನು ಮಾಡಲಾರೆವೂ, ಯಾರೋ ಕವಿ ನಿದ್ದೆಯಲ್ಲೋ, ಮಂಪರಿನಲ್ಲೋ ಬರೆದಿದ್ದ. ಅದಕ್ಕೆ ನಾವು ಕಾರಣರಲ್ಲ, ಶೇಷ ಪ್ರಶ್ನೆಯಾಗಿಯೇ ಉಳಿದರೆ ನಮ್ಮದೇನೂ ಹೋಗುವುದಿಲ್ಲ. ಅಲ್ಲದೆ ನಾವು ಬುದ್ಧಿಜೀವಿಗಳಲ್ಲವಲ್ಲಾ ? ಓದಿ, ಆನಂತರ ತಲೆದಿಂಬಿನಡಿ ಇಟ್ಟು, ನಾವೂ ನಿದ್ದೆಗೆ ಹೋದರಾಯಿತಷ್ಟೆ. ಹೇಗೂ ಇದು ನಿದ್ದೆಯಲ್ಲಿ ಉದ್ಭವವಾಗಿದ್ದಷ್ಟೇ. ———————————————————
Comments