My book on humour “ಬರಹಗಾರನ ಬವಣೆ” under preparation to be printed
- haparna
- Nov 12, 2015
- 5 min read
Having written a number skits-all humour oriented-and most of them having seen publication in various kannada journals, it was felt desirable to see atleast some of them on one single shelf-a platform- for posterity to know such an effort has been made by me. So,as suggested from different quarters, I have taken upon myself the task of collecting them and converting into a print format of a book UNDER THE TITLE “ಬರಹಗಾರನ ಬವಣೆ”. If all goes well, it may see day light eventually in the new year(2016) before spring–H.R.HANUMANTHA RAU. A sample format of some of the pages in that book is given here below:- ————————————————————————————————————- FRONT COVER PAGE 1 ಬ ರ ಹ ಗಾ ರ ನ ಬ ವ ಣೆ (–ಲಲಿತ ಪ್ರಬಂಧ/ ಹರಟೆ, ವಿಡಂಬನೆ, ಮತ್ತು ಅಣಕವಾಡುಗಳು ಮತ್ತು ಮನರಂಜನೆಯ /ಲಘು ಹಾಸ್ಯ ಕಥೆಗಳು.– )
ಲೇಖಕ – ಎಚ್. ಆರ್. ಹನುಮಂತ ರಾವ್
ಪ್ರಕಾಶಕರು: PAGE 2
ಬರಹಗಾರನ ಬವಣೆ
ಬರಹಗಾರನ ಬವಣೆ(BARAHAGARANA BAVANE): —-A collection of humourous skits- stories, light essays and satyres by H.R.Hanumantha Rau B.Sc., M.I.E.,M.I.I.M., Ex-Manager(Metallurgy), Central Laboratory, H.A.l.,(F & F) Div., Bengaluru. E-Mail: hrhrau@gmail.com
Published by …
size:Demy ⅛, No. of Pages: Paper used: 70 GSM N S Maplitho
ಹಕ್ಕುಗಳು : ಲೇಖಕರದು. ಪ್ರಥಮ ಮುದ್ರಣ : ಪ್ರತಿಗಳು. ಬೆಲೆ : ರೂಪಾಯಿಗಳು
ಸಲಹೆ, ಸಹಾಯ: ಬೇಲೂರು ರಾಮ ಮೂರ್ತಿ. ಖ್ಯಾತ ಹಾಸ್ಯ ಸಾಹಿತಿಗಳು.
. ಮುಖ ಪುಟ ವಿನ್ಯಾಸ:
ರೇಖಾ ಚಿತ್ರ ಕರ್ತೃ : ಶ್ರೀ ಸಂಜಯ ಚಪೋಲ್ಕರ್
ಅಕ್ಷರ ಜೋಡಣೆ(DTP):
ಮುದ್ರಣ :
PAGE 3 ಬರಹಗಾರನ ಬವಣೆ
ಪರಿವಿಡಿ: ಪುಟ ಸಂಖ್ಯೆ
೧. ಅರ್ಪಣೆ –
೨. ಮುನ್ನೋಟ
೩. ಪರಿಚಯ(ಲೇಖಕನನ್ನು ಕುರಿತು-ಶ್ರೀ ಎನ್.ಎಸ್.ವಿ. ಪ್ರಸಾದ್ ).
೪. ಹೊನ್ನುಡಿ( ಶ್ರೀ. ಅಪರಂಜಿ ಶಿವು).
೫. ಕೃತಜ್ಞತೆಗಳು-ಎಚ್. ಆರ್. ಹನುಮಂತ ರಾವ್.
೬. ಲಲಿತ ಪ್ರಬಂಧ/ಹರಟೆಗಳು.
೫. ವಿಡಂಬನೆಗಳು.
೬. ಅಣಕವಾಡುಗಳು. . ೭. ಮನರಂಜನೆಯ,ಲಘು ಹಾಸ್ಯ ಕತೆಗಳು.
೭. ಕಡೇ ಪುಟ (ಹಿಂತಿರುಗಿ ನೋಡಿದಾಗ)
PAGE 4
ಬರಹಗಾರನ ಬವಣೆ ಮುನ್ನೋಟ. ತಪ್ಪ್ಪುಮಾಡುವುದು ಸಹಜ. ಮಾನವನ ದೌರ್ಬಲ್ಯಗಳಲ್ಲಿ ಅದೂ ಒಂದು. ತಿದ್ದಿಕೊಳ್ಳುವುದು ಅಷ್ಟೇ ಸಹಜ ಮತ್ತು ಅನಿವಾರ್ಯ. ಈ ಒಂದೇ ಗುಣ ವಿಶೇಷದಿಂದ ಪ್ರಾಣಿಗಳಿಂದ, ರಕ್ಕಸರಿಂದ ಭಿನ್ನವಾಗಿ ಮಾನವರೆಂದು ಗುರುತಿಸಲ್ಪಟ್ಟಿದ್ದೇವೆ. ಇಲ್ಲವಾದಲ್ಲಿ ದಾನವ, ಮಾನವರಲ್ಲಿ ವ್ಯತ್ಯಾಸವೇ ಇರುತ್ತಿರಲಿಲ್ಲವೇನೋ. ಹಾಗೆಯೇ ಜೀವನದ ಅನೇಕ ದುರ್ಭರ ಪ್ರಸಂಗಗಳಲ್ಲೂ, ಕದಡಿದ ವಾತಾವರಣದಲ್ಲೂ, ಮನಸ್ಸನ್ನು ತಿಳಿಯಾಗಿಸಿಕೊಂಡು ನೆಮ್ಮದಿಯನ್ನು ಪಡೆಯಲು ಶಕ್ಯವೆನಿಸುವುದು ಮನರಂಜನೆ. ಅದರ ಭಾಗವಾಗಿ ಹಾಸ್ಯವು ಕೂಡ ಒಂದು ಪ್ರಮುಖ ಪ್ರಕ್ರಿಯೆ. ನಾಲ್ಕಾರು ಮಿತ್ರರು, ಬಂಧುಗಳು ಒಂದೆಡೆ ಸೇರಿದಾಗ, ದೇಶಾವರಿಯ ಮಾತುಗಳಲ್ಲಿ, ತಿಳಿ ನಗೆಯ ಹರಟೆಗಳಲ್ಲಿ ನಮ್ಮ ಪಾಲೂ ಸೇರಿಸಿ, ಮಾತು ದಿಕ್ಕಿದೆಶೆಯಿಲ್ಲದೆ ಎಲ್ಲೆಲ್ಲಿಗೋ ತೇಲಿಹೋಗುತ್ತಾ, ವಾಸ್ತವಕ್ಕೆ ಮತ್ತೆ ಬರುವ ವೇಳೆಗೆ ನಗೆಗಡಲಲ್ಲಿ ಮುಳುಗಿ ಹೋಗಿರುತ್ತೇವೆ. ಮನಸ್ಸು ಹಗುರವಾಗಿ, ಮತ್ತಷ್ಟು ಉತ್ಸಾಹದಿಂದ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತೇವೆ.
ಹಾಸ್ಯ ಬರಹಗಳ ಬಗ್ಗೆ ಹೇಳುವುದಾದರೆ, ಈ ದಿಟ್ಟಿನಲ್ಲಿ ಕನ್ನಡದ ಜನ ಕಳೆದ ಶತಮಾನದಿಂದಲೂ ಅದೃಷ್ಟವಂತರೆಂದೇ ಹೇಳಬೇಕು. ಕೈಲಾಸಂ, ಬೀಚಿ, ದಾಶರಥಿ ದೀಕ್ಷಿತ್, ನಾ.ಕ, ಶ್ರೀರಂಗ, ಪಾವೆಂ, ನಾಡಿಗೇರ, ರಾಶಿ., ಕಸ್ತೂರಿ, ಆರಾಸೆ, ಡಾ. ಮೂರ್ತಿರಾವ್, ಕೇಫ, ಸುನಂದಮ್ಮ, ಡಾ. ರಂಗನಾಥ್, ಹಾರಾ, ರಾಮಿ, ಶಿವಸ್ವಾಮಿ, ಬಾಗೂರು ಚಂದ್ರು, ದ. ಬಾ. ಕುಲಕರ್ಣಿ-ಹೀಗೆ ಬಹಳಷ್ಟು ಮಂದಿ ಹಾಸ್ಯಕ್ಕೆ ಲೇಖನ ಮುಡುಪಾಗಿಟ್ಟವರು ನಮ್ಮನ್ನು ನಗಿಸಿ, ಅರ್ವಾಚೀನ ಸಂತೋಷಕ್ಕೆ ಕಾರಣರಾಗಿದ್ದಾರೆ, ಈಗಲೂ ನಮ್ಮ ನಡುವೆಯೇ ಪ್ರತಿಭಾವಂತರನೇಕ ಮಂದಿ ಇದ್ದು, ತಮ್ಮ ಆರೋಗ್ಯಕರ, ಹಾಸ್ಯ ಬರಹ ಮತ್ತು ಮಾತುಗಳಿಂದ ಜನರನ್ನು ರಂಜಿಸುತ್ತಿದ್ದಾರೆ. ಇವರುಗಳೆಲ್ಲರ ಮುಂದೆ ನಾನು ಅಲ್ಪಜ್ನನೇ ಮತ್ತು ಕುಬ್ಜನೇ. ಅದೂ ಇಂತಹ ಹೊತ್ತಿಗೆಯ ಪ್ರಥಮ ಪ್ರಯತ್ನವಾಗಿ. ಹಾಗಾಗಿ, ಈ ತಿಳಿ ಹಾಸ್ಯ ಸಿಂಚಿತ ಬರಹಗಳು ಓದುಗರಿಗೆ ಮೆಚ್ಚಿಗೆಯಾಗುವುದೋ, ಹೇಗೋ ಎಂಬ ಅಳುಕಿನಿಂದಲೇ ಈ ಹೊತ್ತಿಗೆಯನ್ನು ಸಹೃದಯ ವಾಚಕರ ಮುಂದಿಡುತ್ತಿದ್ದೇನೆ. ರಾಘವಾಂಕನು ‘ಹರಿಶ್ಚಂದ್ರ ಕಾವ್ಯ’ದಲ್ಲಿ ಹೇಳುವಂತೆ ‘ನಡೆವರೆಡಹದೆ, ಕುಳಿತವರೆಡಹುವರೆ ಕಾವ್ಯಮಂ ನಡಸುವಾತಂ,ರಸಾವೇಶ ಮರಹಾಲಸ್ಯ….ಕಡೆತನಕ ಬಂದ ಲೇಸಿಂಗೆ ತಲೆದೂಗೆ’– ಎನ್ನುವಂತೆ ಈ ಬರಹಗಳಲ್ಲಿ ಅಪ್ಪಿತಪ್ಪಿ ಎಲ್ಲಾದರೂ ಅಪ್ರಾಸಂಗಿಕವಾಗಿ ಎಡವಿದ್ದರೆ, ಓದುಗರ, ಪರಿಣಿತರ ತಿದ್ದಿಕೊಳ್ಳುವ ಸಲಹೆಗೆ ತಲೆಬಾಗುವೆ. ಈ ತಿಳಿ ಹಾಸ್ಯ ಸಿಂಚಿತ ಬರಹಗಳಲ್ಲಿ, ಹಲವೆಡೆ ಆಲೋಚನಾ ಪ್ರಚೋದನೆಗೂ ಒತ್ತು ಕೊಟ್ಟಿದೆ. ಕಾರಣ ಬೀಚಿಯವರು ಒಂದೆಡೆ ಹೇಳುವಂತೆ, ಸಮಾಜಕ್ಕೆ ಒಳಿತಾಗುವದಿದ್ದರೆ ಬರೆಹಗಾರನ ಕಾಣಿಕೆಯೂ ಇರಬೇಕೆಂಬ ಮಾತು, ‘ಸಾಹಿತಿಯಾದವನು ಸಮಾಜದ ತಾಯಿಯೂ ಹೌದು, ಅಂತೆಯೇ ನಾಯಿಯೂ ಹೌದು, ಅವನಿರುವುದು ಸಮಾಜದ ಚಿಕ್ಕ ಭಾಗ ಅವನು ಎಂಬುದು ನಿಜ ಹೌದು, ಆದರೆ, ತನ್ನ ಸಮಾಜವನ್ನು ಶುಚಿಯಾಗಿಡುವುದು ಅವನ ನೈತಿಕ ಹೊಣೆ. ಈ ಕರ್ತವ್ಯ ಪಾಲನೆಯ ಕ್ರಮವಾಗಿ ಅವನದಕ್ಕೆ ತಾಯಿಯಾಗಬೇಕು, ಮತ್ತು ನಾಯಿಯಾಗಬೇಕು….’. ಚಾರ್ಲೆ ಡಿಕೆನ್ಸ್ ನ ‘ಆಲಿವರ್ ಟ್ವಿಸ್ಟ್’ ಮತ್ತಿತರ ಕೆಲವು ಕಥೆ, ಕಾದಂಬರಿಗಳಲ್ಲಿ, ಆಲಿವರ್ ಗೋಲ್ಡ್ ಸ್ಮಿತ್ ರ ‘ಸಿಟಿಜನ್ ಆಫ್ ದಿ ವರ್ಲ್ಡ್’ ಪ್ರಬಂಧಗಳಲ್ಲಿ, ನಮ್ಮವರೇ ಆದ ಶಿವರಾಮ ಕಾರಂತ ಮತ್ತಿತರ ಅನೇಕ ಸಾಹಿತಿಗಳಿಂದ ಈ ತೆರನ ಪ್ರಯತ್ನಗಳಾಗಿವೆ. ಆದರೆ, ‘ಲೋಕದ ಡೊಂಕನ್ನು ತಿದ್ದಬೇಕೆಂಬ ಚಟ, ಹೊಸ ದೃಷ್ಟಿಯನ್ನು ಮೂಡಿಸಬೇಕೆಂಬ ಹಾಗೂ ಹೊಸ ತತ್ವಗಳನ್ನು ಹರಡಬೇಕೆಂಬ ಸ್ವಂತಿಕೆಯ ಹಟ’ ದಿಂದ ನನ್ನ ಬರಹಗಳು ದೂರವೇ. ಇಲ್ಲಿ ಯಾರ ಮನ ನೋಯಿಸುವ ಪ್ರಯತ್ನವಿಲ್ಲ. ಸಾಮಾಜಿಕ ಅಥವಾ ರಾಜಕೀಯ ವಿಡಂಬನೆಗಳಲ್ಲೂ ಕೇವಲ ಹಾಸ್ಯವೇ ಮೂಲ ಉದ್ದೇಶ್ಹವೇ ಹೊರತು ಅನ್ಯಥಾ ಭಾವನೆಗಳಿಗೆ ಎಡೆಯಿಲ್ಲ. ಸಮಾಜದ, ಪ್ರಸಕ್ತ ರಾಜಕೀಯದ ಓರೆಕೋರೆಗಳನ್ನ ವಿಡಂಬಿಸಿ, ನಗುವ ತರಸುವ ಉದ್ದೇಶವಷ್ಟೆ. ಹಾಗೆ ಎಲ್ಲಾದರೂ ಎಡವಿದ್ದರೂ ಅದು ಅನಪೇಕ್ಷಿತ ಹಾಗು ಆಕಸ್ಮಿಕ. ಕ್ಷಮೆಯಿರಲಿ. ನಗೆ ಬಂದರೆ ನಕ್ಕುಬಿಡಿ. ನಗೆ ತಡೆ ಹಿಡಿಯಬೇಡಿ. -ಹನುಮಂತ ರಾವ್
PAGE 5
-ಅರ್ಪಣೆ- ನನ್ನ ಈ ಪ್ರಥಮ ಬರವಣಿಗೆಯ ಹೊತ್ತಿಗೆಯನ್ನ ನನ್ನ ಪೂಜ್ಯ ಪ್ರಾತ:ಸ್ಮರಣೀಯರುಗಳಾದ, ಸ್ವರ್ಗಸ್ತ–
— ಮಾತೋಶ್ರೀ ಸುಬ್ಬಮ್ಮಅವರಿಗೆ,
— ತಂದೆ ತೀರ್ಥರೂಪ ಶ್ರೀ ಹೆಬ್ಬಳಲು ರಾಮರಾಯರಿಗೆ,
–ಜ್ಯೇಷ್ಠ ಮಾತೃ ಭಗಿನಿ ಶ್ರೀಮತಿ ಗೌರಮ್ಮ ಅನಂತರಾಮಯ್ಯ ಅವರಿಗೆ ,
–ನನ್ನ ಮಾವ ಶ್ರೀ ರಾಮಶೇಷಯ್ಯ ಅವರಿಗೆ,
— ಪೂಜ್ಯ ಗುರುಗಳಾದ ಶ್ರೀ ಕೆ. ಎನ್. ರಾಮಣ್ಣ ಅವರಿಗೆ,
ಹಾಗೂ
–ಪೂಜ್ಯ ಆಚಾರ್ಯರೆನಿಸಿದ ಶ್ರೀ ಅ. ರಾ .ಸೇ. ಅವರಿಗ—-ಇವರುಗಳೆಲ್ಲರ ಪಾದಾರವಿಂದಗಳಿಗೆ ಭಕ್ತಿ ಪುರಸ್ಸರವಾಗಿ ಅರ್ಪಿಸುತ್ತಿದ್ದೇನೆ–
—–ಎಚ್. ಆರ್. ಹನುಮಂತ ರಾವ್.
PAGE 6 ಬರಹಗಾರನ ಬವಣೆ
ಕೃತಜ್ಞತೆಗಳು ನನ್ನಲ್ಲಿ ಸಾಹಿತ್ಯಾಭಿರುಚಿ ಬೆಳಸಿ, ಪೋಷಿಸಿ, ಸ್ಪೂರ್ತಿ ತುಂಬಿ ಆಶೀರ್ವದಿಸಿದ ತಾಯಿ ಶೃಂಗೇರೀ ಶಾರದೆಗೆ ಮತ್ತು ಬರೆಯುವ ಶಕ್ತಿಯ ವರವ ಕೊಟ್ಟ ವಿಘ್ನ ವಿನಾಯಕನ ಪಾದಾರವಿಂದಗಳಿಗೆ ಭಕ್ತಿ ಪುರಸ್ಸರವಾದ ಕೋಟಿ ಕೋಟ ನಮಸ್ಕಾರಗಳು. ನನ್ನಲ್ಲಿ ಸಾಹಿತ್ಯಾಸಕ್ತಿ, ವಿಚಾರ ವಿಮರ್ಶಾ ಸಾಮರ್ಥ್ಯದ ಗುಣಗಳನ್ನು ಪಾರಂಪಾರಿಕವಾಗಿ ಕೊಟ್ಟು, ಉಳಿಸಿ, ಬೆಳಸಿದ ನನ್ನ ಪೂಜ್ಯ, ಸ್ವರ್ಗಸ್ತ ಮಾತಾ, ಪಿತೃಗಳು ಹಾಗು ಮಾತೃ ಭಗಿನಿ ಗೌರಮ್ಮನವರ ಪಾದಚರಣಗಳಿಗೆ ಅನಂತಾನಂತ ವಂದನೆಗಳು. ನನ್ನ ಮೊಟ್ಟ ಮೊದಲ ಲೇಖನ ರುದ್ರಾಭಿಷೇಕದ ಬಗ್ಗೆ “ರುದ್ರೋಪಾಸನೆ; ಅರ್ಥ ಮತ್ತು ಮಹತ್ವ” ಶೀರ್ಷಿಕೆಯಡಿ ಪ್ರಕಟಿಸಿದ(೨೨/೨/೨೦೦೪ ಸಂಚಿಕೆ) ‘ಕರ್ಮವೀರ’ ಪತ್ರಿಕೆಯವರಿಗೂ, ಭಾರತೀಯ ಜ್ಯೋತಿಷ್ಯ ಶಾಸ್ತ್ರೆದ ಬಗ್ಗೆ ನನ್ನ ಹಲವಾರು ಸಂಶೋಧಿತ ಬರಹಗಳನ್ನು “ಕನ್ನಡ ಪ್ರಭ” ಪತ್ರಿಕೆಯಲ್ಲಿ ಪ್ರಕಟಿಸಿ ಉತ್ತೇಜಿಸಿದ ಆಗಿನ ಜ್ಯೋತಿಷ ಪ್ರಭ’ ವಿಭಾಗದ ಡಾ. ವೆಂಕಿ ಮತ್ತಿತರರಿಗೂ, ಐದಾರು ದಶಕಗಳ ಹಿಂದಿನ ಸುಂದರ ಬೆಂಗಳೂರು ಇಂದು ಯಾವ ಶೋಚನೀಯ ಸ್ಥಿತಿಯನ್ನು ತಲುಪಿದೆಯೆಂಬುದರ ಬಗ್ಗೆ ‘ಬೆಂಗಳೂರು, ಅಂದು-ಇಂದು’ ಲೇಖನವನ್ನು ಮೂರು ಕಂತುಗಳಲ್ಲಿ ಪ್ರಕಟಿಸಿದ (ಏಪ್ರಿಲ್ ೨೦೧೩) ‘ಮಂಗಳ’ ಪತ್ರಿಕೆಯವರಿಗೂ, ನನ್ನ ಲಘು ಹಾಸ್ಯ/ಹರಟೆ/ವಿಡಂಬನೆಗಳನ್ನು “ಸಖಿ”, “ಅಪರಂಜಿ” ಹಾಗೂ “ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟಿಸಿ, ಈ ಪುಸ್ತಕದಲ್ಲಿ ಸೇರಿಸಲು ಅನುಮತಿಯಿತ್ತ ಎಲ್ಲಾ ಸಂಪಾದಕರುಗಳು/ಸಂಸ್ಥೆಗಳವರಿಗೂ ನನ್ನ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುವುದು ನನ್ನ ಆದ್ಯ ಕರ್ತವ್ಯವೂ ಕೂಡ. ಅಂಗ್ಲ ಭಾಷೆಯ ಹಾಸ್ಯ ಚಕ್ರವರ್ತಿ ‘ಪಿ. ಜ಼ಿ. ವುಡ್ ಹೌಸ್’ ಸುಮಾರು ದಶಕಗಳ ಕಾಲ ತಾನು ಬದುಕಿರುವಾಗಲೇ ದಂತೆ ಕತೆಯಾಗಿದ್ದವರು. ಅವರ ಶೈಲಿಯಲ್ಲೇ ಕನ್ನಡಕ್ಕೂ ಅವರನ್ನು ರಾ.ಶಿ’ ಯವರ ‘ಕೊರವಂಜಿ’ ಯಲ್ಲಿ ಪರಿಚಯಿಸಿದ್ದ ಸ್ವರ್ಗಸ್ತ “ಕೇಫ”ನಂತರ ಯಾರೂ ಮುಂದುವರೆಸಲಿಲ್ಲವೆಂಬುದು ನನ್ನ ಭಾವನೆ. ಆ ಕೊರತೆಯನ್ನ ಸ್ವಲ್ಪ ಮಟ್ಟಿಗಾದರೂ ನಿವಾರಿಸಲು, ನನ್ನ ಇತಿಮಿತಿಯಲ್ಲಿ, ಆತನ ಸಹಸ್ರಾರು ಅಭಿಮಾನಿಗಳಲ್ಲೊಬ್ಬನಾಗಿ ನಾನು ಪ್ರಯತ್ನಿಸಿದ್ದುಂಟು. ದಿ. ರಾ.ಶಿ ಮತ್ತು ನಾ. ಕಸ್ತೂರಿ ಯವರ ಕನಸಿನ ಕೂಸಾಗಿ ಜನ್ಮ ತಾಳಿ, ಅವರೇ ಪೋಷಿಸಿ, ಬೆಳಿಸಿದ ‘ಕೊರವಂಜಿ’ ಮತ್ತೆ ಕಾಡಿಗೆ ಹೊರಟುನಿಂತ ಸಂಧರ್ಭದಲ್ಲಿ, ರಾಶಿಯವರ ಸುಪುತ್ರರೊಲ್ಲಬ್ಬರಾಗಿ ‘ಅಪರಂಜಿ ಶಿವೂ’ ಆ ಭಾರವನ್ನ ಹೊತ್ತು ದಿ.‘ಅ. ರಾ. ಸೇ’, ಶೇಷಗಿರಿಯವರ ಸಹಕಾರದಿಂದ ‘ಕೊರವಂಜಿ’ ಯು ‘ಅಪರಂಜಿ’ಯಾಗಿ ಮರುಜನ್ಮ ತಾಳಿದ್ದು ಚರಿತ್ರೆಗೆ ಸಂದು ಹೋದ ವಿಷಯ. ಇದೀಗ ಸಹಸಂಪಾದಕರಾಗಿ ಬೇಲೂರು ರಾಮಮೂರ್ತಿ, ಮತ್ತಿತರ ಟ್ರಸ್ಟಿಗಳು ಶ್ರಮವಹಿಸಿ ಮುಂದುವರೆಸುತ್ತಿರುವದರ ಫಲವಾಗಿ, ಇಂದಿಗೂ ಅಭಿಮಾನಿಗಳ ಕೈ ಸೇರುತ್ತಿದೆ. ‘ಶಿವೂ’ ಅವರಿಗೆ ನನ್ನ ಮೊದಲ ಪ್ರಯತ್ನದ ‘ವುಡ್ ಹೌಸ್’ ಧಾಟಿಯ ಹಾಸ್ಯ ಬರಹವನ್ನ ಕೊಟ್ಟು, ಏನಾಗುವುದೋ ಎಂಬ ನೆನೆಗುದಿಯಲ್ಲಿದ್ದಾಗ ಜನವರಿ ೨೦೧೨ರ ಸಂಚಿಕೆಯಲ್ಲಿ ಪ್ರಕಟವಾದದ್ದು ನನ್ನ ಪ್ರಥಮ ಪ್ರಯತ್ನ ‘ವುಡ್ ಹೌಸ್’ಗೆ ಅರ್ಪಿತವಾದಂತೆ ಭಾವಿಸಿ, ಕೃತಾರ್ಥನಾದೆ. ಅಂದು,ಈ ಬರಹ ಬಾಲಿಷವೆಂದೋ, ನಾನು ಹೊಸಬನೆಂದೋ, ಏನೋ, ನಿರಾಕರಿಸದೆ ಪ್ರಕಟಿಸಿದ್ದಕ್ಕೆ, ಮತ್ತು ಇಂದೂ ನನ್ನ ಲೇಖನಗಳನ್ನು ಪ್ರಕಟಿಸುತ್ತಿರುವ ಶ್ರೀ ಶಿವ ಕುಮಾರ್ ಮತ್ತು ಸಂಪಾದಕೀಯ ಮಂಡಲಿಗೆ ನನ್ನ ಅನಂತಾನಂತ ಪ್ರಣಾಮಗಳು. ಮಾನವ ಪ್ರಯತ್ನವೇನೇ ಇದ್ದರೂ, ಈ ಬರಹ ಸಂಕಲನ ಅಚ್ಚಿಗೆ ಹೋಗುವಂತಾಗಿ, ಬೆಳಕು ಕಾಣಲು ಕೇವಲ ನನ್ನ ಶ್ರಮವೊಂದೇ ಸಾಲದೇ, ದೈವೀಕ ಕೃಪೆಯೂ ಕಾರಣವೆಂಬ ನಂಬಿಕೆಯವನು ನಾನು. ಹಾಗೆ ಈ ತೆರನ ದೈವ ಸಹಾಯ ಅಪರಂಜಿ ಶಿವೂ ಹಾಗು ಬೇಲೂರು ರಾಮ ಮೂರ್ತಿಗಳ ನುರಿತ ಅನುಭವ, ಸಲಹೆ, ಸಹಾಯದ ಮೂಲಕ ಒದಗಿಬಂದು, ಇವರುಗಳಿಗೆ ಚಿರಋಣಿಯಾಗಿದ್ದೇನೆ, ಹಾಗು ಅತ್ಯಂತ ನಮ್ರತೆಯಿಂದ ಗೌರವಾದರಗಳನ್ನು ಈ ಮೂಲಕ ಸಲ್ಲಿಸುವೆ.
ಪರಿಚಯಸ್ತರಾಗಿಲ್ಲದಿದ್ದರೂ ಸಮಾನ ಸ್ನೇಹಿತರ ಮೂಲಕ ಸಂಪರ್ಕಿಸಿ, ನನ್ನ ಪುಸ್ತಕದ ಹೊದಿಕೆಗೊಂದು ಒಪ್ಪುವ ವ್ಯಂಗ್ಯ ಚಿತ್ರ ಬರೆದು ಕೊಡಲು ಕೋರಿದಾಗ, ಅತ್ಯಂತ ವಿಶ್ವಾಸದಿಂದ ಬರಮಾಡಿಕೊಂಡು, ನನ್ನ ಅಭಿಲಾಶೆಗೆ ಸ್ಪಂದಿಸಿ, ತಮ್ಮ ಕೆಲಸದ ಒತ್ತಡಗಳ ನಡುವೆಯೂ, ಬರೆದು ಕೊಟ್ಟ, ಮುಖ ಪುಟದ ಮೇಲೆ ನಾವು ಕಾಣುವ ಉತ್ತಮ ವ್ಯಂಗ್ಯ ಚತ್ರದ ಕರ್ತೃ ಶ್ರೀ ಸಂಜಯ ಚಪೋಳ್ಕರ್ ಅವರಿಗೆ ನಾನು ಬಹಳಷ್ಟು ಅಭಾರಿ.
ನನ್ನ ಪರಿಚಯ ಲೇಖನವನ್ನ ಬರೆದು ಕೊಟ್ಟಶ್ರೀ ಎನ್. ಎಸ್. ವಿ. ಪ್ರಸಾದ ಅವರು ನನ್ನ ಸಾಹಿತ್ಯಾಸಕ್ತಿ ಹಾಗು ಬರಹಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಯಗಳಲ್ಲೂ ಸಕ್ರಿಯ ಸಹಕಾರ ತೋರುತ್ತಿರುವವರು. ವೃತ್ತಿ ಜೀವನದ ಸಖ್ಯವಲ್ಲದೆ, ಪರಮಾಪ್ತ ಮಿತ್ರರೂ ಆಗಿರುವವರು. ತೆಲಗು ಭಾಷೆಯ ಸುಪ್ರಸಿದ್ಧ ಗೇಯಕಾರ ದಿ. ಎಮ್.ಎಸ್. ರಾಮ ರಾಯರು ಮೂಲ ತೆಲುಗಿನಲ್ಲಿ ರಚಿಸಿದ್ದ ರಾಮಾಯಾಣದ ಎಲ್ಲಾ ಕಾಂಡಗಳನ್ನೂ ಕನ್ನಡಕ್ಕೆ ಗೇಯ ರೂಪದಲ್ಲಿ ಭಾವಾನುವಾದ ಮಾಡಿ, ಮಾರುತಿಯ ಕೃಪಾಕಟಾಕ್ಷಕ್ಕೆ ಪಾತ್ರರಾದ ಶ್ರೀ. ಪ್ರಸಾದ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.
ನನ್ನ ಬರವಣಿಗೆಯ ತುಡಿತದ ಬಗ್ಗೆ ಮೊದಲಿನಿಂದಲೂ ಅರಿವಿದ್ದ, ನನ್ನ ಎಲ್ಲಾ ಪ್ರಯತ್ನಗಳಲ್ಲೂ ಕೈ ಜೋಡಿಸಿ, ತನ್ನ ದಿನ ನಿತ್ಯದ ಗೃಹ ಕೃತ್ಯಗಳ ಜವಾಬ್ದಾರಿಯ ನಡುವೆಯೂ ನಿರಂತರ ಸಹಾಯ, ಸಹಕಾರ ಕೊಡುತ್ತಿರುವ ನನ್ನ ಧರ್ಮ ಪತ್ನಿ ಸೌ. ಕಮಲಳಿಗೆ ನನ್ನ ಮೊಟ್ಟ ಮೊದಲ ಕೃತಜ್ಞತೆಗಳು ಸಲ್ಲಬೇಕು. ‘ಸಪ್ತ ಪದಿ’ ಯ ಅರ್ಥ ಇಲ್ಲಿ ಸಾಕಾರಗೊಂಡಿದೆಯೆಂಬುದು ನಿರ್ವಿವಾದಿತ. ಹೆಜ್ಜೆ, ಹೆಜ್ಜೆಗೂ, ಬರೆಯಲು ಉತ್ತೇಜಿಸಿ, ಸಹಕಾರ ತೋರಿದ, ಪ್ರಕಟಣೆಗೆ ಹೋಗುವ ಮುನ್ನ ನಿಷ್ಪಕ್ಷಪಾತ ವಿಮರ್ಶೆಗೆ ಒಡ್ಡಿ, ವಾಚಕರ ದೃಷ್ಟಿಯಲ್ಲಿ ಸರಿತೋರುವ ಮಟ್ಟಕ್ಕೆ ಬರಲು ಸೂಕ್ತ ಸಲಹೆಗಳನ್ನು ವಿದೇಶದಲ್ಲಿದ್ದೂ, ಕೊಟ್ಟು ಸಹಕರಿಸುತ್ತಿರುವ, ನನ್ನ ಹೆಣ್ಣು ಮಕ್ಕಳು ಸೌ. ಅಪರ್ಣ, ಸೌ. ರಾಜೇಶ್ವರಿ, ಹಾಗೂ ಅಳಿಯಂದಿರು ಚಿ. ರವಿಶಂಕರಭಟ್ಟ ಮತ್ತು ಅರವಿಂದ ಕಶ್ಯಪ -ಇವರುಗಳಿಗೆ ಚಿರಕಾಲ ಆಯುರಾರೋಗ್ಯ, ಐಶ್ವ್ವರ್ಯ ಭಾಗ್ಯ ಭಗವಂತ ದಯಪಾಲಿಸಲಿ. ನನ್ನ ಮೊಮ್ಮಕ್ಕಳಾಗಿ, ಚಿ. ಅಥರ್ವ ಭಟ್ಟ ಹಾಗು ಚಿ. ಅಚಿಂತ್ಯ ಕಶ್ಯಪರೂ ನನ್ನ ಬರವಣಿಗೆಯ ಬಗ್ಗೆ ಆಸಕ್ತಿ ತೋರಿದ್ದುಂಟು. ಕಾರ್ಟೂನ್ ಚಿತ್ರಗಳನ್ನು ಬರೆಯಲು ಉತ್ಸುಕರಾಗಿರುವುದು ಅತ್ಯಂತ ಆನಂದದಾಯಕ ವಿಷಯ. ಅವರುಗಳು, ಹಾಗು ಮೊಮ್ಮಗಳು ಪುಟ್ಟ ಅದ್ವಿಕ ನೂರ್ಕಾಲ ಯಶೋವಂತರಾಗಿ ಬಾಳಲಿ.
—ಹೆಬ್ಬಳಲು ರಾಮರಾವ್ ಹನುಮಂತ ರಾವ್.
Comentários